ನಾನೊಂದು ಅನಂತ ಅವಕಾಶದಲ್ಲಿ ಕಂಪ್ಯೂಟರಿಗೆ ಬುದ್ದಿ ಹೇಳುತ್ತಾ ಕೂತಿದ್ದೇನೆ. ಇಲ್ಲಿ ಗೋಡೆಗಳೇ ಇಲ್ಲ. ಸುತ್ತಾ ಇರುವುದು ಪಾರದರ್ಶಕ ಗಾಜಿನ ತಡೆಗಳು ಮತ್ತು ಅಪಾರದರ್ಶಕ ಮನುಜರು. ಇಲ್ಲಿ ಪರಿಣಿತ ಹಕ್ಕಿಗಳಿವೆ. ಆದರವು ಬಣ್ಣದಾಕಾಶದೆದುರು ಹಾರುವುದಿಲ್ಲ ಹಾಡುವುದೂ ಇಲ್ಲ. ಬರಿದೆ ಮೀಟಿಂಗುಗಳ ನಡೆಸುತ್ತವೆ. ಸುಳ್ಳುಗಳ ಬರೆದಿಟ್ಟು ರಿವ್ಯೂಗಾಗಿ ಕಾಯುತ್ತವೆ ಮತ್ತು ಬೇಕೆಂದಾಗ ಸುಳ್ಳೇ ನಗುತ್ತವೆ. ಇಲ್ಲಿ ಕಾಲ ದಿನಗಳಲ್ಲೋ ನಿಮಿಷಗಳಲ್ಲೋ ಸರಿಯುವುದಿಲ್ಲ. ಕಾಫಿ ಟೀ ಬ್ರೇಕುಗಳಲ್ಲೂ ಇನ್ಕ್ರಿಮೆಂಟು ಬೇಕುಗಳಲ್ಲೂ ವೀಕೆಂಡುಗಳಲ್ಲೂ ವೀಕ್ ಡೇಗಳಲ್ಲೂ ನಿಧಾನಕ್ಕೆ ಸಾಯುತ್ತದೆ. ಇಲ್ಲಿಂದ ದೂರ ದೂರ [...]
Posts Tagged ‘ಐಟಿ ಗೋಳು’
ಇದು hike ಹೊತ್ತು!
Posted: June 20, 2011 by sukhesh in ಕತೆಯಲ್ಲ ಕವಿತೆಯೂ ಅಲ್ಲTags: ಐಟಿ ಗೋಳು, kannada poetry
ಇವು ಕನ್ನಡದ ಹೈಕುಗಳಲ್ಲ ಮಾರಾಯ್ರೆ ಆಂಗ್ಲದ hikeಗಳು! ಸಾಧಾರಣದಿಂದ ಭಾರೀ ಮಳೆ ಅನ್ನೋ ಮಂತ್ರ ಗೊತ್ತುಂಟಲ್ಲ. ಆಮೇಲೆ ಆಗಿದ್ದೆಷ್ಟು ಅಂತ ಕೇಳಿದವರೇ ಇಲ್ಲ! ನಮ್ಮಲ್ಲೋ ಒಂದಿದೆ ಮಾರಾಯ್ರೇ ಕರೀತಾರೆ ಅವಮಾನ ಇಲಾಖೆ ಅಂತ ಎಲ್ಲ. ಅದೂ ಹಿಂಗೇ ಹವಾಮಾನ ಇಲಾಖೆದೇ ಕಾಪಿ. ಮೆನೆಜರ್ರೋ ಟೀ ಎಲ್ಲೂ ಕೂತ್ಕಂಡು ಕುಡೀತಾರೆ ಕಾಫಿ ಬರೀತಾರೆ ಇಷ್ಟಿಷ್ಟುದ್ದ mailಉ ಹಿಂದಿನ್ ಸಲಕ್ಕಿಂತ ಖಂಡಿತ ಮೇಲು ಈ ಬಾರಿ ಭಾರೀ ಭಾರೀ ಗುಡುಗು ಸಿಡಿಲು. ಭಾರೀಯಿಂದ ಅತಿ ಭಾರೀ hikeಉ ಅಂತೆಲ್ಲ ಬಂದ್ವೇ [...]