ಅರೆ ನಿದ್ರೆ ಅರೆ ಎಚ್ಚರ ನೇರಳೆ ಹಣ್ಣು ತಿಂದ ಕನಸು ಧಡ್ ಎಂದು ಕಂಬಿಗೆ ತಲೆ ತಾಗಿದರೆ ಗೊತ್ತಿಲ್ಲದೂರಲ್ಲಿ ಪಲಾಯನವಾದಿ ಪ್ರೈವೇಟ್ ಬಸ್ಸು. ಬೀದಿ ಬದಿ ಮನೆಯಲ್ಲಿ ಮಗು ಅಳುತ್ತಲೇ ಇರಬೇಕಂತಿಲ್ಲ. ನದಿಗುಂಟ ನಡೆವಾಗ ಕೆಂಪುಕಲ್ಲುಗಳನ್ನೇ ಏಕೆ ಆಯುತ್ತೀಯ? ಹತ್ತಿ ಇಳಿದು ಸುತ್ತಿ ನುಲಿದು ಸಾಗುವಾಗ ಎಡಕ್ಕೊಮ್ಮೆ ನೋಡು ದಾರಿ ಇನ್ನೂ ಅಲ್ಲೇ ಸುತ್ತುತ್ತಿದೆ. ದೂರದಲ್ಲಿ, ಮೈಲು ದೂರದಲ್ಲಿ ನಡೆಯುತ್ತಿರುವುದು ನೀನೆ! ಇಕೋ, ಈ ತಿರುವು ತಿರುಗುತ್ತಲೇ ಮುಗಿಯುತ್ತೆ ಹಾಡ್ಯ ನಿರೀಕ್ಷಿತ ಅಪಘಾತದಂತೆ ಸಿಕ್ಕುತ್ತೆ ನಿಮ್ಮಜ್ಜನ ಊರಿನ [...]
Posts Tagged ‘ಬಾಲ್ಯ’
ಮನಸು ಪ್ರೈವೇಟ್ ಬಸ್ಸು
Posted: July 22, 2011 by sukhesh in ನನ್ನ ಕವಿತೆTags: ಬಾಲ್ಯ, childhood memories, Journey, kannada poetry, Poetry
ನ್ಯೂಟನ್ನನ ತಪ್ಪುಗಳು
Posted: June 17, 2011 by sukhesh in ನನ್ನ ಕವಿತೆTags: ಬಾಲ್ಯ, childhood memories, kannada poetry
ಎಲ್ಲ ಪ್ರಶ್ನೆಗಳಿಗೂ ನ್ಯೂಟನ್ನು ಉತ್ತರಿಸಲಾರ ಕಣೆ ನವ್ವಾಲೆ ಹುಡುಗಿ. ಕೆಲವು ಪ್ರಶ್ನೆಗಳಿಗೆ ಉತ್ತರವೇ ಇರುವುದಿಲ್ಲ. ನಿನ್ನೆ ಇಲ್ಲೇ ಪಕ್ಕದಲ್ಲಿ ಉಸಿರು ನನ್ನದೋ ಏನೋ ಎಂಬಂತೆಲ್ಲ ಇದ್ದವರೆಲ್ಲ ಇಂದು ಮೈಲು ದೂರ ಸರಿದು ಹೋಗಿರುವುದಕ್ಕೆ ಯಾವ ಫೋರ್ಸು ಕಾರಣ ನ್ಯೂಟನ್ ಕೇಳಿ ಹೇಳುವೆಯ? ಒಂದನೇ ಕ್ಲಾಸಿನ ಟೀಚರಿಗೆ ಒಂದು ತಲೆಯಾದರೆ ಎರಡನೇ ಕ್ಲಾಸಿನ ಟೀಚರಿಗೇನು ಎರಡು ತಲೆಯಿರುವುದಿಲ್ಲ. ಹಾಗಂತ ಇಲ್ಲಿ ಐನ್ ಸ್ಟಯ್ನ್ ತಪ್ಪೇನು ಇಲ್ಲ. ಅಂತ ನಾ ಹೇಳಿದರೆ ಸಿಡುಕುತ್ತಾರಲ್ಲೇ ಈ ಜನ. ಇವರಿಗೆ ನಗುವುದು ಗೊತ್ತಿಲ್ಲದ್ದಕ್ಕೆ [...]
ಒಂದು ಅರ್ಧ ಬರೆದ ಕವಿತೆ
Posted: June 13, 2011 by sukhesh in ನನ್ನ ಕವಿತೆTags: ಬಾಲ್ಯ, childhood memories, kannada poetry, Romantic
ಹೇಳಿ ಬಿಡುತ್ತೇನೆ ಕೇಳು ಗೆಳತಿ. ತಲೆಗೆ ತಲೆ ಡಿಕ್ಕಿಯಾದದ್ದು ಆಕಸ್ಮಿಕವೇ ಇರಬಹುದು ತುಟಿಗೆ ತುಟಿ ತೆಕ್ಕೆಯಾದದ್ದು ಖಂಡಿತಾ ಅಲ್ಲ! ಧಿಡೀರನೆ ಬೇಸಿಗೆಯ ನಟ್ಟ ನಡುವೆ ಇಂತಾದ್ದೊಂದು ಮಳೆ ಸುರಿದು ಊರು ಕೇರಿ ಕೊಚ್ಚೆ ಕೊಳೆ- ಯೆಲ್ಲ ಕೊಚ್ಚಿ ಹೋಗಿ ಇಮಾರತುಗಳು ಅಮಾನತಾದಾಗ ನಾನು ನೀನು ಕದ್ದು ಕೊಬ್ಬರಿ ಬೆಲ್ಲ ಉಪ್ಪು ಹುಣಸೆಹಣ್ಣು ಅಮಟೆಕಾಯಿ ಉಪ್ಪಿನಕಾಯಿ ಅಂತೆಲ್ಲ ತರಾವರಿ ತಿಂದು ತೇಗಿದ್ದನ್ನ ದೇವತೆಗಳು ಚಳಿಯಲ್ಲಿ ನಡುಗುತ್ತಲೇ ನೋಡಿದ್ದುಂಟು ಆಮೇಲೆ ಕರೆಂಟಿಲ್ಲದ ಮಳೆಗಾಲದ ಸಂಜೆಗಳಲ್ಲಿ ರವ್ವೆಂದು ರಾಚುವ ಇರುಸಲಿನ ನಡುವೆಯೂ [...]
ಮಲ್ಲಿಗೆ ಮತ್ತೊಂದು ಮಂಜು ಕವಿದ ಹಾದಿ
Posted: May 27, 2011 by sukhesh in ನನ್ನ ಕವಿತೆTags: ಬಾಲ್ಯ, childhood memories, kannada poetry, Romantic
ಇಂದು ಹೀಗಾಯ್ತು. ನಮ್ಮ ಹಿತ್ತಲಲ್ಲೂ ಎರಡು ಮಲ್ಲಿಗೆಗಳು ಅರಳಿ ನಿಂತವು. ನಿಂತಿದ್ದ ಸೂರ್ಯ, ಮರೆತಿದ್ದ ಕಾಲಗಳ ಮಿಕಿ ಮಿಕಿ ನೋಡುತ್ತಾ ನಾನೂ ನಿಂತೆ. ನೆಟ್ಟವ ನಾನಲ್ಲ; ಎಂದೂ ನೀರುಣಿಸಲಿಲ್ಲ. ತಮ್ಮದೇ ಹಿತ್ತಲೆಂಬಂತೆ ಅರಳಿಯೇ ಬಿಟ್ಟವಲ್ಲ! ಇರುವುದು ನಾಲ್ಕೇ ದಳ; ಗತ್ತಿಗೇನು ಕಮ್ಮಿಯಿಲ್ಲ. ತೂರಿ ಬರುವ ನರುಗಂಧಕ್ಕೆ ಸ್ವರಗಳೂ ನಾಚಿಬಿಟ್ಟವಲ್ಲ! ರಾಗಗಳೂ ತೂಗಿಬಿಟ್ಟವಲ್ಲ! ಹಿಂದೊಮ್ಮೆ… ಚಂದ್ರನ ಕಾಂತಿ, ಮಲ್ಲಿಗೆಯ ಘಮ ಸಂಪಿಗೆಯ ನಗು ಕದ್ದು ನೀ ಓಡಿ ಬಂದಾಗಲೂ ನಿಂತು ಬಿಟ್ಟಿದ್ದೆ ಹೀಗೆಯೇ. ಕೆನ್ನೆಗೊಂದು ದೃಷ್ಟಿ ಬೊಟ್ಟಿನಂತ ಮುತ್ತಿಡಬೇಕೆಂಬುದ [...]
ಮಳೆ
Posted: April 20, 2011 by sukhesh in ನನ್ನ ಕವಿತೆTags: ಬಾಲ್ಯ, ಮಳೆ, childhood memories, kannada poetry
ಸಮಾನಾರ್ಥಕಗಳ ಬರೆಯಿರಿ ಎಂದರು ನನ್ನ ಹೆಸರಿಗೆ ನಿನ್ನ ಹೆಸರು ಚೊಕ್ಕವಾಗಿ ಕೊರೆದು ಕುಳಿತೆ ನವ್ಯ ಕಾವ್ಯದಂತ ಆಕಾಶ ಇಣುಕುತ್ತಿತ್ತು ಕಿಟಕಿಯಿಂದ ಈ ಬಾರಿ ಮುಂಗಾರು ಪ್ರಬಲ ಸಾಧಾರಣದಿಂದ ಭಾರೀ ಮಳೆ ಆಕಾಶವೇ ನಿನಗಾವುದು ಸಮಾನಾರ್ಥಕ? ಇನ್ನೇನು ಮುಗಿದೇ ಬಿಡುತ್ತೆ ಕೊನೇ ಪಿರಿಯಡ್ಡು ಗೊತ್ತೇ ಆಗಲಿಲ್ಲ ನೀ ಸರಿದು ಹೋದದ್ದು ಜಿಯಾಗ್ರಫಿ ಕ್ಲಾಸಿನಲ್ಲಿ ಭೂ ಫಲಕಗಳು ಸರಿದು ಹಿಸ್ಟರಿಯಲ್ಲಿ ತಲೆಗಳು ಉರುಳಿಬಿಟ್ಟವು ಈಗ ನೆನೆಯುತ್ತ ಹೊರಟಿದ್ದೇನೆ; ಮಳೆ ಜೋರು