ರೆಪ್ಪೆ ಮುಚ್ಚಿ ತೆರೆವಷ್ಟರಲ್ಲಿ ಕಳ್ಳ ಮಳೆಯೊಂದು ಇಣುಕಿ ಮರೆಯಾಯ್ತು ಹನಿಗಳಲ್ಲಿ ಮೂಡಿದ ಬಿಂಬಗಳಲ್ಲಿ ಅವಳ ಮುಂಗುರುಳು ಬಣ್ಣ ಬಣ್ಣ ಜೊತೆ ನಡೆವಾಗ ಸಿಲೋನ್ ರೇಡಿಯೋದಲ್ಲಿ ಮುಖೇಶ್ ರಫಿ ಕಿಶೋರ್ ನಿಯಾನ್ ದೀಪಗಳಡಿ ಸಣ್ಣಗೆ ನಾಚಿದ ಹನಿಗಳಿಗೆ ಮಳೆ ಅಂತ ಹೆಸರಿಟ್ಟೆ ಅವಳ ತುಟಿ ಮೇಲೆ ಬಿದ್ದ ಹನಿಯೊಂದು ಆವಿಯಾಗಿ ಮೋಡ ಸೇರಿ ಬಿಟ್ಟಿತು ಹನಿಯೊಂದ ಕಳಕೊಂಡ ನಾ ನೆನಪುಗಳ ಸೇರಿಬಿಟ್ಟಿದ್ದೇನೆ ಇರುಸಲು ಹೊಡೆವ ಮಳೆಗೆ ಹದಾ ಸುಟ್ಟ ಹಪ್ಪಳ ಹಬೆಯಾಡೋ ಕಾಫಿ… ಬೇಡ [...]
Posts Tagged ‘ಮಳೆ’
ಮಳೆ ಸುರಿದದ್ದಷ್ಟೇ ನಿಜ
Posted: April 30, 2012 by sukhesh in ನನ್ನ ಕವಿತೆTags: ಕನ್ನಡ ಕವಿತೆಗಳು, ಮಳೆ, ವಿರಹ, kannada poetry
ತೂಫಾನು
Posted: September 12, 2011 by sukhesh in ನನ್ನ ಕವಿತೆTags: ಕನ್ನಡ ಕವಿತೆಗಳು, ಮಳೆ, Collage, kannada poetry
ಐದು ದಿನ ಜಡಿದ ಮಳೆಯನ್ನ ಇಂಚುಗಳಲ್ಲಲ್ಲ ಮಾರಾಯ ಅಡಿಗಳಲ್ಲಿ ಅಳೆಯಬೇಕು ಗೇಟು ದಾಟದೆ ಅಲೆದದ್ದನ್ನ ಯಾರು ಲೆಕ್ಕ ಇಡಬೇಕು? ಬಂಗಾಳ ಕೊಲ್ಲಿಯಲ್ಲೊಂದು ನಿರಂತರ ನೀರ ಮುತ್ತಿಕ್ಕುವ ತೂಫಾನು ಬೆಂಗಳೂರಲ್ಲಿ ಒಡೆದೇ ಹೋದ ಪಚ್ಚ ಬಲೂನು ಕೆಂಪು ಬಿಳೀ ವಾಯು ವಜ್ರ ಕಳೆದು ಕೊಂಡ ಮುಖದವಳದ್ದೇನು ತಪ್ಪಿಲ್ಲ ಬಿಡಿ ಹೊಳೆನರಸೀಪುರದಲ್ಲಿ ಡ್ರೈವರಿಗೆ ದಾರಿ ತಪ್ಪಿದಂತಾದ್ದೊಂದು ಕವನ ಅರ್ಧ ರಾತ್ರಿಯಲ್ಲಿ ಸಿಕ್ಕಿದ್ದು ಡ್ಯೂಪ್ಲಿಕೇಟು ಸಿಗರೇಟು ಮತ್ತೀ ಸಿಗರೇಟು ಬಿದೆಬೇಕು ಅಂದುಕೊಂಡಾಗಲೇ ಗಿಫ್ಟಾಗಿ ಬರುವ ದುಬಾರಿ ಲೈಟರು ಹೊರಬಂದರೆ ಕೇಸರಿ ಬಿಳಿ [...]
ಗೌರಿ ಹಬ್ಬ
Posted: August 30, 2011 by sukhesh in ನನ್ನ ಕವಿತೆTags: ಕನ್ನಡ ಕವಿತೆಗಳು, ಮಳೆ, kannada poetry
ಸುಮ್ ಸುಮ್ನೆ ಖುಷಿಯಾಗ್ತಿದೆ ಇವತ್ತು ಗೌರಿ ಹಬ್ಬ ಒಂದು ಪರವಾಗಿಲ್ಲದ ಮಳೆಗಾಲ ಸುರಿಸಿದ ಮಳೆಯ ಧೈನಿಕ ಲೆಕ್ಕವ ಇಟ್ಟು ಕೂಡಿ ಕಳೆದು ಗುಣಿಸಿ ನೋಡಿ ಲೆಕ್ಕ ತಪ್ಪಿದ ಮಗುವಂತೆ ಅಳುವಾಗ ಬೇಕಾಗಿದ್ದು ಒಂದೇ ಒಂದು ಕೊನೇ ಹನಿ ನೀ ಇಲ್ಲೇ ಇರು ಹೀಗೆ ಹೋಗಿ ಬರುವೆ ಮುತ್ತು ಪೋಣಿಸಿದ ಸೂಜಿ ಮಲ್ಲಿಗೆಗಳ ತರುವೆ ಮುಂದಿನ ರೈಲಿಗಿನ್ನೂ ಸಮಯವಿದೆ ನೀ ಕೊಟ್ಟ ನೋವುಗಳೆಲ್ಲ ಪ್ರೀತಿಯುಂಡು ಇಷ್ಟೆತ್ತರ ನಿಂತಿದ್ದಾವಂತೆ ಸಣ್ಣ ಮಳೆ ಇನ್ನೂ ಜಿನುಗುತ್ತಿದೆ ಭಯ ಬೇಡ ನಿಂಗೊತ್ತು ಮಂಜಿನಂತ [...]
ಮಧ್ಯ ಮಳೆಗಾಲದ ಹನಿಗಳು
Posted: August 11, 2011 by sukhesh in ನನ್ನ ಕವಿತೆTags: ಕನ್ನಡ ಕವಿತೆಗಳು, ಮಳೆ, kannada poetry
ಒಂದಷ್ಟು ಹಳೇ ಚಿತ್ರಗಳು ಅಳಿಸಬೇಕಿತ್ತು ಸುರಿಯೋ ಮಳೆಯಲ್ಲಿಟ್ಟರೆ ಅಕೋ, ಬಣ್ಣ ಹಚ್ಚಿ ಥಕ ಥೈ ಕುಣಿತ ತದಡಿಯಲ್ಲೊಂದು ದಿನ ಹದಾ ಮಳೆ ನೆಂದ ನಾಯಿಮರಿಗೆ ಗಾಳೀಪಟದ ಕನಸು ಕಸುವಿರದ ತೆರೆಗಳಲ್ಲಿ ಉಳಿದೇ ಹೋಯ್ತೆ ಹೆಜ್ಜೆ ಗುರುತು! ಮಧ್ಯ ಮಳೆಗಾಲದ ಹನಿಗಳು ಮಂದ್ರ ಸ್ಥಾಯಿ ಮಳೆಯೂ ಬೋರಾದ ಮೇಲೆ ಎಲ್ಲಾ ಖಾಲಿ ಖಾಲಿ
ಇಲ್ಲ ಕಣೆ, ರಾತ್ರಿ ಎರಡಾಯ್ತು ಇನ್ನಿವತ್ತು ನಿದ್ದೆ ಇಲ್ಲ. ಕಳೆದೆರಡು ಜನ್ಮದ್ದೂ ಬಾಯಾರಿಕೆ ತಣಿವಷ್ಟು ಮಳೆ ಸುರಿದು ಆರಡಿ ಈರನೇ ಅಬ್ಬಿಗುಂಡೀಲಿ ಮುಳುಗಿ ಅರಬ್ಬೀ ಸಮುದ್ರ ಸೇರಿ ಊರೆಲ್ಲ ನಿರಾಳ ನಿಟ್ಟುಸಿರಿಟ್ಟು ಅರವತ್ತು ರೂಪಾಯಿ ಅಧಿಕೃತ ಸಾರಾಯಿ ಕುಡಿದು ದಣಿದು ಮಲಗಿಯಾಗಿದೆ. ಕವನ ಘನವೋ ದ್ರವವೋ ಇನ್ನೂ ಗೊತ್ತಾಗಿಲ್ಲ. ರೇಡಿಯೋ ಕಿವಿಗಾನಿಸಿ ಕಾಯುತ್ತಿದ್ದಾನೆ ಬಸ್ ಸ್ಟಾಂಡಿನ ತಾತ ಅವಳು ಜಮಾನದಲ್ಲಿ ಹಾಡಿದ್ದ ಹಾಡಿಗಾಗಿ. ನಾಳೆ ನನ್ನ ಹುಡುಗಿ ಮದುವೆ ಉಡುಗೊರೆ ಕೊಡಲು ಏನೂ ಇಲ್ಲ. ಬಿತ್ತಿ ಬಂದಿದ್ದೇನೆ [...]
ಗುಡುಗಿ ಭೋರ್ಗರೆದು ಬೆಂಕಿಯುಗುಳೋ ಬಾನು ಭೂಮಿಯೊಡಲಿಗೆ ಎರೆವುದು ತಂಪನ್ನಷ್ಟೇ. ಮುಗಿಲು ಮುನಿವಾಗ ನೆನಪಾಯ್ತು ನಿನ್ನ ಸವಿ ಕೋಪ
ಮಳೆ
Posted: April 20, 2011 by sukhesh in ನನ್ನ ಕವಿತೆTags: ಬಾಲ್ಯ, ಮಳೆ, childhood memories, kannada poetry
ಸಮಾನಾರ್ಥಕಗಳ ಬರೆಯಿರಿ ಎಂದರು ನನ್ನ ಹೆಸರಿಗೆ ನಿನ್ನ ಹೆಸರು ಚೊಕ್ಕವಾಗಿ ಕೊರೆದು ಕುಳಿತೆ ನವ್ಯ ಕಾವ್ಯದಂತ ಆಕಾಶ ಇಣುಕುತ್ತಿತ್ತು ಕಿಟಕಿಯಿಂದ ಈ ಬಾರಿ ಮುಂಗಾರು ಪ್ರಬಲ ಸಾಧಾರಣದಿಂದ ಭಾರೀ ಮಳೆ ಆಕಾಶವೇ ನಿನಗಾವುದು ಸಮಾನಾರ್ಥಕ? ಇನ್ನೇನು ಮುಗಿದೇ ಬಿಡುತ್ತೆ ಕೊನೇ ಪಿರಿಯಡ್ಡು ಗೊತ್ತೇ ಆಗಲಿಲ್ಲ ನೀ ಸರಿದು ಹೋದದ್ದು ಜಿಯಾಗ್ರಫಿ ಕ್ಲಾಸಿನಲ್ಲಿ ಭೂ ಫಲಕಗಳು ಸರಿದು ಹಿಸ್ಟರಿಯಲ್ಲಿ ತಲೆಗಳು ಉರುಳಿಬಿಟ್ಟವು ಈಗ ನೆನೆಯುತ್ತ ಹೊರಟಿದ್ದೇನೆ; ಮಳೆ ಜೋರು