Posts Tagged ‘ವಿರಹ’

ರೆಪ್ಪೆ ಮುಚ್ಚಿ ತೆರೆವಷ್ಟರಲ್ಲಿ ಕಳ್ಳ ಮಳೆಯೊಂದು ಇಣುಕಿ ಮರೆಯಾಯ್ತು ಹನಿಗಳಲ್ಲಿ ಮೂಡಿದ ಬಿಂಬಗಳಲ್ಲಿ ಅವಳ ಮುಂಗುರುಳು ಬಣ್ಣ ಬಣ್ಣ   ಜೊತೆ ನಡೆವಾಗ ಸಿಲೋನ್ ರೇಡಿಯೋದಲ್ಲಿ ಮುಖೇಶ್  ರಫಿ ಕಿಶೋರ್ ನಿಯಾನ್ ದೀಪಗಳಡಿ ಸಣ್ಣಗೆ ನಾಚಿದ ಹನಿಗಳಿಗೆ ಮಳೆ ಅಂತ ಹೆಸರಿಟ್ಟೆ   ಅವಳ ತುಟಿ ಮೇಲೆ ಬಿದ್ದ ಹನಿಯೊಂದು ಆವಿಯಾಗಿ ಮೋಡ ಸೇರಿ ಬಿಟ್ಟಿತು ಹನಿಯೊಂದ ಕಳಕೊಂಡ ನಾ ನೆನಪುಗಳ ಸೇರಿಬಿಟ್ಟಿದ್ದೇನೆ   ಇರುಸಲು ಹೊಡೆವ ಮಳೆಗೆ ಹದಾ ಸುಟ್ಟ ಹಪ್ಪಳ ಹಬೆಯಾಡೋ ಕಾಫಿ… ಬೇಡ [...]

ವಸಂತದುಸಿರಂತೆ ಬಂದಾಗ ನೀ ಕೋಗಿಲೆ ಹಾಡಿತ್ತು ಸೀತಾ ಸರ್ಕಲ್ಲಲ್ಲೂ. ಮಳೆಯಿಲ್ಲದೆಯೂ ಮೂಡಿತ್ತು ಕಾಮನಬಿಲ್ಲು. ಈಗ ಈ ಶಿಶಿರದಲ್ಲಿ ಕೊಗಿಲೆಯೆಲ್ಲಿ? ಚಿಗುರೆಲ್ಲಿ? ಉಸಿರೆಲ್ಲಿ? ಎಲ್ಲ ಅಳಿದಾಯ್ತು ನೀ ತೊರೆದಂದೆ. ಉರುಳುತ್ತವೆ ಇಬ್ಬನಿಗಳು ಹೇಳುತ್ತಾ ಸಾಂತ್ವಾನ ಮೆಲ್ಲಗೆ. ಉರುಳುತ್ತವೆ ಕಂಬನಿಗಳು ಒಂದಾಗುತ್ತ ಮಣ್ಣೊಳಗೆ. ತಡೆದಿದ್ದರೆ ಚೆನ್ನಿತ್ತು ಇಬ್ಬನಿಗಳ; ಈ ಹನಿಗಳ. ಹೇಗೆ ತಡೆಯಲಿ? ಇದು ಚಳಿಗಾಲ ಜೊತೆ ನೀನಿಲ್ಲ ನಾನೊಂದು ಬೋಳುಮರ.

———-೧———– ಹುಣ್ಣಿಮೆಯ ರಾತ್ರಿಗಳಲ್ಲಿ ಸಿಗರೇಟಿಗೆ ನಿಷೇಧವೇನಿಲ್ಲ ಟೆರೇಸಿನ ಮೇಲೆಲ್ಲಾ ನುಣ್ಣನೆಯ ಬೆಳಕು ಚೆಲ್ಲಿ ತಣ್ಣನೆ ಗಾಳಿ ಹಾಡಿದರೂ ಹೃದಯ ಖಾಲಿಯೇ ಇದೆಯಲ್ಲ! ———-೨———– ಚಂದ್ರನಿಗೇನು ಬಿಡು ಅತ್ತಲಿನ ಬೆಳಕ ಇತ್ತ ಬೀರುವ ದಲ್ಲಾಳಿ ಅವ. ಅವನಿಗೆಲ್ಲಿಂದ ಸ್ವಯಂಪ್ರಭೆ? ಮತ್ತೆ ಮತ್ತೆ ನೆನಪುಗಳ ಚಿತೆಯೇರಿಸಿ ಬೆಳದಿಂಗಳಲ್ಲೇ ಸುಡುವ ಸಂಚುಕೋರ. ಅವನಿಗೇಕೆ ಕೊಡಲಿ ಮರ್ಯಾದೆ? ———-೩———— ಹುಣ್ಣಿಮೆಯ ರಾತ್ರಿಗಳಲ್ಲೂ ಮಾಂಸದಂಗಡಿಯ ಬಳಿ ಹದ್ದುಗಳು ಹಾರಿಯೇ ಹಾರುತ್ತವೆ. ಅಮಾವಾಸ್ಯೆಯಾದರೇನು ಬಿಡು ಹನ್ನೊಂದರವರೆಗೂ ಬಾರು ತೆಗೆದೇ ಇರುತ್ತದೆ!