Posts Tagged ‘kannada poetry’

ಮೊನ್ನೆ ಹೀಗೆ ಗಾಂಧಿಬಜಾರಿನ ನಕ್ಷತ್ರಲೋಕದಲ್ಲಿ ಪೋಲಿಸಿನವ ರಶೀದಿ ಹರಿವಾಗ ನಾ ಅಲ್ಲೇ ಇದ್ದೆ   ತಣ್ಣನೆಯದೊಂದು ಮಳೆಗೆ ಕಾದಂತೆ ಕಾಲೇಜು ಮೇಲ್ಸೇತುವೆಗಳ ಕೆಳಗೆಲ್ಲ ಸಿಕ್ಕಾಪಟ್ಟೆ ಗಜಿಬಿಜಿ ಖಾಸಗೀ ರಸ್ತೆಗಳೆಲ್ಲ ಬೀದಿಪಾಲು ಮತ್ತು ಕಾದುನಿಂತ ಟ್ರಕ್ಕುಗಳ ಕಣ್ಣಂಚಲ್ಲಿ ಎರಡೇ ಹನಿ ನೀರು   ಹನಿ ಹನಿ ಘನಿಸಿ ಒನ್ ವೇಯಲ್ಲಿ ನುಗ್ಗಿದ ಮೋಡಗಳೆಲ್ಲ ನಿನ್ನ ಕಂಗಳ ಮೋಹವಾಗಿ ನಮ್ ಏರಿಯಾದಲ್ಲಿ ಮಳೆಯಿಲ್ಲ ಗುಲ್ ಮೊಹರುಗಳಡಿ ಬಣ್ಣಬಣ್ಣದ ಬರಗಾಲ   ಹಳೆಯದೊಂದು ಪಯಣ ಹಳೆ ಸ್ಕೂಲು ಹತ್ತಿರ ರೋಲ್ ನಂಬರ್ ಮರಗಳು ಹಾಜರಿ ಹೇಳುವಾಗ ಗಕ್ಕಂತ ಎಚ್ಚರ ಕಪ್ಪು ಕಪ್ಪು ಆಗಸದ ಮೇಲೆಲ್ಲೋ ಪ್ರೀತಿಯ ಮರಿಬೆಕ್ಕು ಮಿಯಾಂವ್ ಮಿಯಾಂವ್ ಸದ್ದು ಚಿಕ್ಕಿಗಳೇ ಕಾಯಬೇಡಿ ಚಂದ್ರಮನ   ನಾ ಇಲ್ಲೇ ಕೂಲ್ ಕಾರ್ನರಲ್ಲಿ ಒಂದಿಡೀ ಚಹಾ ಕುಡಿಯುತ್ತೇನೆ ಉದ್ದನೆಯ ಕಪ್ಪು ರಸ್ತೆ ಹಟಾತ್ತನೆ ಏಕಾಂಗಿಯಾಗಿಬಿಟ್ಟಿದೆ

ರೆಪ್ಪೆ ಮುಚ್ಚಿ ತೆರೆವಷ್ಟರಲ್ಲಿ ಕಳ್ಳ ಮಳೆಯೊಂದು ಇಣುಕಿ ಮರೆಯಾಯ್ತು ಹನಿಗಳಲ್ಲಿ ಮೂಡಿದ ಬಿಂಬಗಳಲ್ಲಿ ಅವಳ ಮುಂಗುರುಳು ಬಣ್ಣ ಬಣ್ಣ   ಜೊತೆ ನಡೆವಾಗ ಸಿಲೋನ್ ರೇಡಿಯೋದಲ್ಲಿ ಮುಖೇಶ್  ರಫಿ ಕಿಶೋರ್ ನಿಯಾನ್ ದೀಪಗಳಡಿ ಸಣ್ಣಗೆ ನಾಚಿದ ಹನಿಗಳಿಗೆ ಮಳೆ ಅಂತ ಹೆಸರಿಟ್ಟೆ   ಅವಳ ತುಟಿ ಮೇಲೆ ಬಿದ್ದ ಹನಿಯೊಂದು ಆವಿಯಾಗಿ ಮೋಡ ಸೇರಿ ಬಿಟ್ಟಿತು ಹನಿಯೊಂದ ಕಳಕೊಂಡ ನಾ ನೆನಪುಗಳ ಸೇರಿಬಿಟ್ಟಿದ್ದೇನೆ   ಇರುಸಲು ಹೊಡೆವ ಮಳೆಗೆ ಹದಾ ಸುಟ್ಟ ಹಪ್ಪಳ ಹಬೆಯಾಡೋ ಕಾಫಿ… ಬೇಡ [...]

ಕವಿಯೊಬ್ಬನ ಕೊಲೆಗೈದು ಬರುತ್ತಿದ್ದೇನೆ ರಕ್ತ ಅಂಟದ ಕೈಗಳ ಜೇಬೊಳಗೆ ಇಳಿಬಿಟ್ಟು ಅನಾಥ ಕತೆಯ  ಗೋರಿಗಳ ಮೇಲೆ ಹೂಬಿಡದ ಕವಿತೆಗಳ ಬಿತ್ತುವುದು ಅಪರಾಧವಲ್ಲವೇ ಪ್ರಭು?   ಕಲ್ಲಾಗುವುದು ಶಾಪವಲ್ಲ; ಕಲೆ ಮಳೆ ಬಿಸಿಲು ಇಬ್ಬನಿ ಕಣ್ಣೀರು ಮೂತ್ರ ಮತ್ತೊಂದು ಮರಳಾಗುವುದು ಕಮ್ಮಿಯೇನಲ್ಲ ಆ ಊರು ಈ ಊರು ಗುಬ್ಬಿ ಗೂಡು ಜೋಡಿ ಜೋಡಿ ಹೆಜ್ಜೆ ಗುರುತು ಉಪ್ಪು ಸಿಹಿ ನೀರು ಹಾಡೆಂಬ ಪಾಡು   ಕಲ್ಲಾಗಿ ಮರಳಾಗಿ ಗಿಡ ಮರ ವರ ಹಾರೈಕೆ ಶಾಪವಾಗಿ ಎಲ್ಲವೂ ಆಗಿ ರೇಷ್ಮೆ [...]

ಬುರ್ಖಾ ಸುಂದರಿಯ ಕಂಗಳು ಪಾರಿವಾಳದ ರೆಕ್ಕೆಗಳು ಅರಳುತ್ತಿದ್ದಂತೆ ಎಲ್ಲೋ ಒಂದೆಡೆ ಗುಲ್ಮೊಹರೊಂದು ಚಡಪಡಿಸಿ ನರಳಿ ಮೆಲ್ಲಗೆ ಕೆಂಪು ಕೆಂಪು ರಕ್ತದ ಹನಿ ಬಸಿದು ಹೂವೊಂದ ಅರಳಿಸಿ… ಮತ್ತೊಂದು ಮೇ ಬರುವ ಸೂಚನೆ ಸುಸ್ಪಷ್ಟ ಹೊಸ ಕರವಸ್ತ್ರಗಳ ಕೊಳ್ಳಬೇಕಾಗಿದೆ ನೆಪಮಾತ್ರದ ಟಾರು ರಸ್ತೆ ಮೇಲೆ ಹೊಸ ಕಾರುಗಳು ಓಡಾಡುವಾಗ ಗಣಕ ಯಂತ್ರದ ಮೇಲೊಂದಷ್ಟು ಬಿಸಿ ಧೂಳು ಬಿಳಿ ಮೋಡಕ್ಕೂ ಚೂಪು ಚೂಪು ಈಟಿ ಎಸೆವ ಬೆಳ್ಳಿ ದೇವದಾರುಗಳು ಮೂರು ಸಾವಿರದ ಕೊಡಲಿಗಳಿಗೆ ಶರಣಾಗುವಾಗ ಕನಸು ಹೊತ್ತ ಹದಿನಾರರ ಮನಸು [...]

ನನ್ನೊಳಗಿನ ಉಗ್ರ ಬಣ್ಣದ ಧ್ವಜದೆಡೆ ನಿಲ್ಲದೆ ನಡೆಯುತ್ತಾನೆ ಮರದ ಟೇಬಲ್ಲು ಎತ್ತರ ಜಾಸ್ತಿ ಅಂತ ಗೊಣಗುತ್ತಾನೆ ನನ್ನೊಳಗಿನ ಉಗ್ರ ಕೊಡಬೇಕಾದ ಅಸಲಿಗೆ ಬಡ್ಡಿಯ ಲೆಕ್ಕ ಮರೆಯುತ್ತಾನೆ ಜನವರಿಯಲ್ಲಿ ಬಾರದ ಮಳೆ ಮತ್ತು ನಿಲ್ಲದ ಚಳಿಗೆ ಶಪಿಸುತ್ತಾನೆ ನನ್ನೊಳಗಿನ ಉಗ್ರ ನಿನಗಾಗಿ ಲಿಫ್ಟುಗಳಲ್ಲಿ ಕಾಯುತ್ತಾನೆ ಎದುರಾದಾಗ ಮಂಕಾಗುತ್ತಾನೆ ನಗಲಾರದೆ ಅಳುತ್ತಾನೆ ನನ್ನೊಳಗಿನ ಉಗ್ರ ನೂರಕ್ಕೆ ನೂರಿಪ್ಪತ್ತು ಮಾರ್ಕ್ಸು ಗಳಿಸುತ್ತಾನೆ ಕ್ಯಾಲ್ಕುಲೇಟರಿಗೆ ಬ್ಯಾಟರಿ ಹುಡುಕುತ್ತಾ ರಾತ್ರಿಗಳ ಕಳೆಯುತ್ತಾನೆ ನನ್ನೊಳಗಿನ ಉಗ್ರ ಹುಡುಕುತ್ತಾನೆ; ಪಡೆಯುತ್ತಾನೆ; ಕಳೆಯುತ್ತಾನೆ ಮತ್ತು ಕಳೆದದ್ದ ಮರೆತಂತೆ ನಟಿಸುತ್ತಾನೆ [...]

-೧- ಪ್ರೀತಿಯೆಂದರೆ ಪುಸ್ತಕದ ನಡುವಿಟ್ಟ ಹಳದಿ ಹೂ ಪಕಳೆ ಹನಿ ಹನಿಯಲ್ಲಿ ಮಿಂದ ಜೇಡರ ಬಲೆ ಯಾತಕ್ಕೋ ತಿರುಗೋ ಏಕಾಂಗಿ ಇಳೆ -೨- ನಾ ಹೀಗೆಯೇ ಪ್ರಾಸವಿಲ್ಲದ ಕವಿತೆಯಂತೆ ಸ್ವರಗಳಿಲ್ಲದ ರಾಗದಂತೆ ಕೊಟ್ಟು ಬಿಡುತ್ತೇನೆ ನನ್ನ ನಿನಗೆ ಬರೆದು ಹಾಡಿಬಿಡು ಹುಟ್ಟುತ್ತೇನೆ ನಿನ್ನ ಕಂಗಳೊಳಗೆ -೩- ಕನಸು… ಹೆದ್ದಾರಿ ಖಾಲಿ ಇರುತ್ತಾ ನಿಧಾನ ಸರ್ವಿಸ್ ರೋಡಲ್ಲಿ ಹೋಗೋದು ಅರ್ಧ ರಾತ್ರೀಲಿ ಎದ್ದು ಬುದ್ಧ ಆಗೋದು ಸುಮ್ಮನೆ ಒಂದಿನ ಕದ್ದು ಹಣೆಗೊಂದು ಮುತ್ತು ಕೊಡೋದು -೪- ಇಬ್ಬನಿಯೆಡೆ ಬಣ್ಣದ [...]

ದೀಪಾವಳಿ ಮುನ್ನ ಮೂರೂ ಮುಕ್ಕಾಲು ರಜ ಬಂದು ಹೋಗುವೆಯಾ ಹಿಂದಿನ ದಿನ? ದೀಪಾವಳಿ ನೆವಕ್ಕೆ ಪುಟ್ಟದೊಂದು ಶಾಪಿಂಗು. ಹ್ಯಾಂಗರಿಗೆ ನೇಣು ಬಿದ್ದ ಬಟ್ಟೆಗಳಲ್ಲಿ ಇನ್ನೂ ಉಸಿರಿದೆ. ಆಗಲೇ ಮಹಜರಿಗೆ ಸೈನು ಹಾಕು ಅಂತಾನೆ ಮೂರು ನಕ್ಷತ್ರದ ಪೋರ ಹಾಗಾಗಿ… ಓದುತ್ತ ಕಳೆದ ದೇವರುಗಳ ಬರೆಯುತ್ತಾ ಹುಡುಕಬೇಕಾಗಿದೆ. ಹಾಗಂತ ನಿನಗೇನೂ ಚಿಂತೆ ಬೇಡ ನಿನ್ನಿಂದ ಸಿಗರೇಟುಗಳನ್ನೇನು ಕೇಳುವುದಿಲ್ಲ ನೀ ಹೆಚ್ಚೆಂದರೆ ಬೆಂಕಿಪೊಟ್ಟಣಕ್ಕೆ ದಿಸ್ಕೌಂಟು ಕೊಡಬಲ್ಲೆ ಅಷ್ಟೆ ಹಬ್ಬಕ್ಕೆ ಇರು ಅನ್ನೋಲ್ಲ ರಿಟರ್ನ್ ಟಿಕೇಟು ಹೊತ್ತು ಬರುವವಳಿಗೆ ಇರು ಅಂತ [...]

ಉತ್ತರಗಳ ಮೇಲೆ ತೇಲುತ್ತಾ ಇದೆ ಒಂದು ಪ್ರಶ್ನೆ ಯಾಕಾದರೂ ಬಂದೆ ನೀ ತಣ್ಣನೆಯದೊಂದು ಮೋಡದ ಮೇಲೆ ಇಂತಾದ್ದೊಂದು ನಗು ಚೆಲ್ಲುತ್ತಾ? ಯಾಕಾದರೂ ಇರಬೇಕು ಆಯತದೊಳಗೊಂದು ವೃತ್ತ? ಎಲ್ಲಾ ಊರುಗಳದ್ದೂ ಒಂದೇ ಮುಖ ಹೆದ್ದಾರಿಗೊಂದು ಪೆಟ್ಟಿಗೆ ಅಂಗಡಿ ಪಡಸಾಲೆಯಲ್ಲಿ ಚೌಕಾಬಾರ ಅಥವಾ ಮೂರೆಲೆ ಕಾಲದೂಡಲು ಯಾವುದೋ ಒಂದು ಆಟ ಹಿಂಬಾಗಿಲ ಬಣ್ಣಗಳೇ ಬೇರೆ ಎಲ್ಲವಕ್ಕೂ ಬೇರೆಯದೇ ಚಿತ್ತಾರ ಒಂದೊಂದರಲ್ಲೂ ನಮ್ಮವೇ ಆದ ನೂರೊಂದು ಸ್ವರ ಮುಂಬಾಗಿಲು ಹಿಂಬಾಗಿಲು ಒಂದೇ ಇರಲಾರದೆ? ಮೈಲುಗಳ ಲೆಕ್ಕ ಇಟ್ಟರೆ ಒಂದಿಷ್ಟು ದೂರಗಳು ಕರಗುತ್ತಾ [...]

ಅಲೆಗಳಲ್ಲಿ ಕರಗಿದ ಸಕ್ಕರೆ ಮೂಟೆಯೇ ನುಸುಳಿ ಬಿಡುತ್ತೀ ನೀ ಒಮ್ಮೊಮ್ಮೆ ಮಂಜಿನೊಳಗೆ ಬೆಳ್ಳಂಬೆಳ್ಳಗಿನ ಕೆಮ್ಮಿನ ಹಾಗೆ ಋತುಗಳು ತಿರುಗುತ್ತಲೇ ಇರುತ್ತವೆ. ಇಬ್ಬನಿಗೆ ಮಳೆಯ ಧ್ಯಾನ ಮಳೆಹನಿಗೋ… ಕಾಮನಬಿಲ್ಲಿನ ಕನಸು ಕವಿತೆ ಹುಡುಕುತ್ತಲೇ ಸಾಯುತ್ತದೆ ಕಳೆದುಹೋದ ಸಾಲ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಕಳೆದ ಕಾರು ಮಿನರ್ವಾ ಸಿಗ್ನಲ್ಲಲ್ಲೊಂದು ಬಾರು ಪ್ರಾಸಕ್ಕೆ ಖಂಡಿತಾ ಕಾಯಲಾರವು ಪಲ್ಸರು ಮತ್ತು ಅಲ್ಸರು ಮೊನ್ನೆ ಹೀಗೆ ಸತ್ತ ಕವಿತೆಯೊಂದು ನಳನಳಿಸಿ ಗೊರಿಯಿಂದೆದ್ದು ತನಗೆ ತಾನೇ ರಾಗವೊಂದ ತೊಟ್ಟು ಹಾಡಿಬಿಟ್ಟಿತಲ್ಲಾ… ಗುಟ್ಟಿನ ವಿಚಾರ… ಕಳೆದ ಸಾಲೊಂದು ಸಿಕ್ಕಿತಂತೆ [...]

ಕಾಯುವುದೆಂದರೆ… ನಾ ನಿಂತಲ್ಲೇ ನಿಂತು ನಕ್ಷತ್ರವಿಲ್ಲದ ಪೋಲೀಸನ ಇಷಾರೆಗೆ ಕಾದಿರುವಾಗ ಬಿಳೀ ಮೋಡಗಳ ಕರಿ ಮೋಡಗಳು ಅಟ್ಟಿ ಕಪ್ಪು ಹೆಪ್ಪಾದಂತೆ ಸಿಗ್ನಲ್ಲು ಬಿದ್ದರೂ… ಮಳೆ ಬೀಳದು! ಮಾತು ಕತೆ ಹರಟೆ ವಾದ ವಿವಾದ ನಗು ಮೌನ… ಸ್ವಿಸ್ ಬ್ಯಾಂಕಲ್ಲಿ ನಮ್ಮ ನಿಮ್ಮ ದುಡ್ಡು ಕಜ್ಜಿ ಮೈಗೆ ಆರೈಕೆಯಿಲ್ಲದ ಉದಾಸ ರಸ್ತೆ ಹೊಂಡ ಗುಂಡಿಗಳಲ್ಲೇ ಎಮ್ಮೆಲ್ಲೆ ಫಂಡು. ಬಯಲುಸೀಮೆಯ ಧೂಳಿಗೆ ಉಸಿರು ಕಟ್ಟಿದಾಗ ಒಂತರಾ ಖುಷಿ. ಉಸಿರು ಕಟ್ಟಿದ್ದು ನನಗೋ? ಧೂಳಿಗೋ? ಮನೆಯ ಮುಂದೊಂದು ಗುಲಾಬಿ ಗಿಡವೇ ಇಲ್ಲವಲ್ಲೇ [...]