Posts Tagged ‘Poetry’

ಅರೆ ನಿದ್ರೆ ಅರೆ ಎಚ್ಚರ ನೇರಳೆ ಹಣ್ಣು ತಿಂದ ಕನಸು ಧಡ್ ಎಂದು ಕಂಬಿಗೆ ತಲೆ ತಾಗಿದರೆ ಗೊತ್ತಿಲ್ಲದೂರಲ್ಲಿ ಪಲಾಯನವಾದಿ ಪ್ರೈವೇಟ್ ಬಸ್ಸು. ಬೀದಿ ಬದಿ ಮನೆಯಲ್ಲಿ ಮಗು ಅಳುತ್ತಲೇ ಇರಬೇಕಂತಿಲ್ಲ. ನದಿಗುಂಟ ನಡೆವಾಗ ಕೆಂಪುಕಲ್ಲುಗಳನ್ನೇ ಏಕೆ ಆಯುತ್ತೀಯ? ಹತ್ತಿ ಇಳಿದು ಸುತ್ತಿ ನುಲಿದು ಸಾಗುವಾಗ ಎಡಕ್ಕೊಮ್ಮೆ ನೋಡು ದಾರಿ ಇನ್ನೂ ಅಲ್ಲೇ ಸುತ್ತುತ್ತಿದೆ. ದೂರದಲ್ಲಿ, ಮೈಲು ದೂರದಲ್ಲಿ ನಡೆಯುತ್ತಿರುವುದು ನೀನೆ! ಇಕೋ, ಈ ತಿರುವು ತಿರುಗುತ್ತಲೇ ಮುಗಿಯುತ್ತೆ ಹಾಡ್ಯ ನಿರೀಕ್ಷಿತ ಅಪಘಾತದಂತೆ ಸಿಕ್ಕುತ್ತೆ ನಿಮ್ಮಜ್ಜನ ಊರಿನ [...]

Sorry. I have moved the post to my English blog to keep this site exclusively for Kannada writings. You can find it here: http://anenigmaticjourney.wordpress.com/2011/07/28/big-pink-apartment-and-the-lullaby-of-a-staggered-mind/

ಕವಿತೆಯ ಅಪ್ಪ ಯಾರೆಂದು ಕೇಳಬೇಡವೇ ಹುಡುಗಿ. ಅದು ನೋವಾಗಿರಬಹುದು ಇಲ್ಲಾ ನಲಿವಾಗಿರಬಹುದು. ಕವಿತೆ ಹುಟ್ಟುವುದು ಹಾದರಕ್ಕೇನೆ! ಮೆಕ್ ಡೋನಾಲ್ದಿನ ಭೂಪನ ನೋಡು ಬೆದರುಗೊಂಬೆ ಅನ್ನಲಾರೆ ಅವನ. ಅಕ್ಕ ಪಕ್ಕ ಕೂರುತ್ತವೆ ನಿರ್ಭೀತ ಹಕ್ಕಿಗಳು; ಕೊಡುತ್ತ ಫೋಟೋಗಳಿಗೆ ಪೋಸು. ಇಂತಲ್ಲೂ ಹುಟ್ಟಬಹುದು ಕವಿತೆಯೆಂಬ ಕೂಸು! ಕವಿತೆ ಹುಟ್ಟಬಹುದು ಸಿಗರೇಟಿನ ಹೊಗೆ ವರ್ತುಲಗಳಲ್ಲಿ. ಕವಿತೆ ಬದುಕೀತು ಬಾರಿನ ಕಮಟು ವಾಸನೆಯಲ್ಲೂ. ಕವಿತೆ ಬೆಳೆದೀತು ಮೆಚ್ಚಿದರೂ ಮೆಚ್ಚದ ಮಾತುಗಳಲ್ಲಿ. ಸಿಹಿನೀರಲ್ಲಿ ಎಲ್ಲವೂ ಎಲ್ಲರೂ ಮುಳುಗುತ್ತಾರೆ; ಸಾಂದ್ರಗೊಳಿಸು ಬೆರೆಸುತ್ತಾ ಇಷ್ಟಿಷ್ಟೇ ಉಪ್ಪು. ಕೊನೆಗೆ [...]