ಹೇಳಿ ಬಿಡುತ್ತೇನೆ ಕೇಳು ಗೆಳತಿ. ತಲೆಗೆ ತಲೆ ಡಿಕ್ಕಿಯಾದದ್ದು ಆಕಸ್ಮಿಕವೇ ಇರಬಹುದು ತುಟಿಗೆ ತುಟಿ ತೆಕ್ಕೆಯಾದದ್ದು ಖಂಡಿತಾ ಅಲ್ಲ! ಧಿಡೀರನೆ ಬೇಸಿಗೆಯ ನಟ್ಟ ನಡುವೆ ಇಂತಾದ್ದೊಂದು ಮಳೆ ಸುರಿದು ಊರು ಕೇರಿ ಕೊಚ್ಚೆ ಕೊಳೆ- ಯೆಲ್ಲ ಕೊಚ್ಚಿ ಹೋಗಿ ಇಮಾರತುಗಳು ಅಮಾನತಾದಾಗ ನಾನು ನೀನು ಕದ್ದು ಕೊಬ್ಬರಿ ಬೆಲ್ಲ ಉಪ್ಪು ಹುಣಸೆಹಣ್ಣು ಅಮಟೆಕಾಯಿ ಉಪ್ಪಿನಕಾಯಿ ಅಂತೆಲ್ಲ ತರಾವರಿ ತಿಂದು ತೇಗಿದ್ದನ್ನ ದೇವತೆಗಳು ಚಳಿಯಲ್ಲಿ ನಡುಗುತ್ತಲೇ ನೋಡಿದ್ದುಂಟು ಆಮೇಲೆ ಕರೆಂಟಿಲ್ಲದ ಮಳೆಗಾಲದ ಸಂಜೆಗಳಲ್ಲಿ ರವ್ವೆಂದು ರಾಚುವ ಇರುಸಲಿನ ನಡುವೆಯೂ [...]
Posts Tagged ‘Romantic’
ಒಂದು ಅರ್ಧ ಬರೆದ ಕವಿತೆ
Posted: June 13, 2011 by sukhesh in ನನ್ನ ಕವಿತೆTags: ಬಾಲ್ಯ, childhood memories, kannada poetry, Romantic
9
ಮಲ್ಲಿಗೆ ಮತ್ತೊಂದು ಮಂಜು ಕವಿದ ಹಾದಿ
Posted: May 27, 2011 by sukhesh in ನನ್ನ ಕವಿತೆTags: ಬಾಲ್ಯ, childhood memories, kannada poetry, Romantic
ಇಂದು ಹೀಗಾಯ್ತು. ನಮ್ಮ ಹಿತ್ತಲಲ್ಲೂ ಎರಡು ಮಲ್ಲಿಗೆಗಳು ಅರಳಿ ನಿಂತವು. ನಿಂತಿದ್ದ ಸೂರ್ಯ, ಮರೆತಿದ್ದ ಕಾಲಗಳ ಮಿಕಿ ಮಿಕಿ ನೋಡುತ್ತಾ ನಾನೂ ನಿಂತೆ. ನೆಟ್ಟವ ನಾನಲ್ಲ; ಎಂದೂ ನೀರುಣಿಸಲಿಲ್ಲ. ತಮ್ಮದೇ ಹಿತ್ತಲೆಂಬಂತೆ ಅರಳಿಯೇ ಬಿಟ್ಟವಲ್ಲ! ಇರುವುದು ನಾಲ್ಕೇ ದಳ; ಗತ್ತಿಗೇನು ಕಮ್ಮಿಯಿಲ್ಲ. ತೂರಿ ಬರುವ ನರುಗಂಧಕ್ಕೆ ಸ್ವರಗಳೂ ನಾಚಿಬಿಟ್ಟವಲ್ಲ! ರಾಗಗಳೂ ತೂಗಿಬಿಟ್ಟವಲ್ಲ! ಹಿಂದೊಮ್ಮೆ… ಚಂದ್ರನ ಕಾಂತಿ, ಮಲ್ಲಿಗೆಯ ಘಮ ಸಂಪಿಗೆಯ ನಗು ಕದ್ದು ನೀ ಓಡಿ ಬಂದಾಗಲೂ ನಿಂತು ಬಿಟ್ಟಿದ್ದೆ ಹೀಗೆಯೇ. ಕೆನ್ನೆಗೊಂದು ದೃಷ್ಟಿ ಬೊಟ್ಟಿನಂತ ಮುತ್ತಿಡಬೇಕೆಂಬುದ [...]