ಯಕಶ್ಚಿತ್ ಹುಣ್ಣಿಮೆ

Posted: ಜೂನ್ 6, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:,

———-೧———–

ಹುಣ್ಣಿಮೆಯ ರಾತ್ರಿಗಳಲ್ಲಿ
ಸಿಗರೇಟಿಗೆ ನಿಷೇಧವೇನಿಲ್ಲ
ಟೆರೇಸಿನ ಮೇಲೆಲ್ಲಾ
ನುಣ್ಣನೆಯ ಬೆಳಕು ಚೆಲ್ಲಿ
ತಣ್ಣನೆ ಗಾಳಿ ಹಾಡಿದರೂ
ಹೃದಯ ಖಾಲಿಯೇ ಇದೆಯಲ್ಲ!

———-೨———–

ಚಂದ್ರನಿಗೇನು ಬಿಡು
ಅತ್ತಲಿನ ಬೆಳಕ ಇತ್ತ ಬೀರುವ
ದಲ್ಲಾಳಿ ಅವ.
ಅವನಿಗೆಲ್ಲಿಂದ ಸ್ವಯಂಪ್ರಭೆ?
ಮತ್ತೆ ಮತ್ತೆ ನೆನಪುಗಳ ಚಿತೆಯೇರಿಸಿ
ಬೆಳದಿಂಗಳಲ್ಲೇ ಸುಡುವ ಸಂಚುಕೋರ.
ಅವನಿಗೇಕೆ ಕೊಡಲಿ ಮರ್ಯಾದೆ?

———-೩————

ಹುಣ್ಣಿಮೆಯ ರಾತ್ರಿಗಳಲ್ಲೂ
ಮಾಂಸದಂಗಡಿಯ ಬಳಿ
ಹದ್ದುಗಳು ಹಾರಿಯೇ ಹಾರುತ್ತವೆ.
ಅಮಾವಾಸ್ಯೆಯಾದರೇನು ಬಿಡು
ಹನ್ನೊಂದರವರೆಗೂ ಬಾರು
ತೆಗೆದೇ ಇರುತ್ತದೆ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s