ಒಂದು ಅರ್ಧ ಬರೆದ ಕವಿತೆ

Posted: ಜೂನ್ 13, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:, , ,

ಹೇಳಿ ಬಿಡುತ್ತೇನೆ ಕೇಳು ಗೆಳತಿ.
ತಲೆಗೆ ತಲೆ ಡಿಕ್ಕಿಯಾದದ್ದು
ಆಕಸ್ಮಿಕವೇ ಇರಬಹುದು
ತುಟಿಗೆ ತುಟಿ ತೆಕ್ಕೆಯಾದದ್ದು
ಖಂಡಿತಾ ಅಲ್ಲ!

ಧಿಡೀರನೆ ಬೇಸಿಗೆಯ ನಟ್ಟ ನಡುವೆ
ಇಂತಾದ್ದೊಂದು ಮಳೆ ಸುರಿದು
ಊರು ಕೇರಿ ಕೊಚ್ಚೆ ಕೊಳೆ-
ಯೆಲ್ಲ ಕೊಚ್ಚಿ ಹೋಗಿ
ಇಮಾರತುಗಳು ಅಮಾನತಾದಾಗ
ನಾನು ನೀನು ಕದ್ದು ಕೊಬ್ಬರಿ ಬೆಲ್ಲ
ಉಪ್ಪು ಹುಣಸೆಹಣ್ಣು ಅಮಟೆಕಾಯಿ ಉಪ್ಪಿನಕಾಯಿ
ಅಂತೆಲ್ಲ ತರಾವರಿ ತಿಂದು ತೇಗಿದ್ದನ್ನ
ದೇವತೆಗಳು ಚಳಿಯಲ್ಲಿ ನಡುಗುತ್ತಲೇ ನೋಡಿದ್ದುಂಟು

ಆಮೇಲೆ ಕರೆಂಟಿಲ್ಲದ ಮಳೆಗಾಲದ
ಸಂಜೆಗಳಲ್ಲಿ ರವ್ವೆಂದು ರಾಚುವ
ಇರುಸಲಿನ ನಡುವೆಯೂ
ಕಿಟಕಿ ಬಳಿ ಹದವಾಗಿ ಸುಟ್ಟ
ಹಲಸಿನ ಹಪ್ಪಳ ಅಮ್ಮ ಕೊಟ್ಟ ಬಿಸ್ಸೀ
ಕಾಫೀ ಮತ್ತೊಂದಿಷ್ಟು ನಿನ್ನಿಂದ ಕದ್ದ
ಬೆಚ್ಹ ಬೆಚ್ಚನೆ ಕನಸುಗಳ ತಬ್ಬುತ್ತ
ನಕ್ಕಿದ್ದುಂಟು; ಹನಿಗಳು
ಇನ್ನೆಲ್ಲೋ ನಿನ್ನ ತಟ್ಟಿಯೇ ಬಂದಿವೆ
ಅಂತ ನಂಬಿದ್ದುಂಟು

ಮತ್ತೆ ತುಸು ತಡವಾಗಿ ಬಂದ
ಅಂತ ಚಳಿಗಾಲದ ಜೊತೆ ನೀ
ಮುನಿಸಿಕೊಂಡಿದ್ದ ನೋಡಿದ್ದುಂಟು
ಚಳಿಗಾಲದಲ್ಲಿ ಮಳೆಯಾಗುವುದಿಲ್ಲವಂತೆ
ಹಾಗಂತ ದೇವತೆಗಳು ಮೊನ್ನೆ ತಾನೇ ಹೇಳಿ ಹೋಗಿದ್ದಾರೆ
ಅಂತ ನೀ ಹೇಳಿದ ಸುಳ್ಳುಗಳ ನಂಬಿದ್ದುಂಟು; ನಂಬಿದಂತೆ ನಟಿಸಿದ್ದುಂಟು
ಆದೀತು ಬಿಡು ಒಂದು ಮಳೆ ಅಂತೆಲ್ಲ
ಸುಳ್ಳೇ ನಂಬಿಕೆಗಳ ಕೊಟ್ಟದ್ದುಂಟು

Advertisements
ಟಿಪ್ಪಣಿಗಳು
 1. madhu ಹೇಳುತ್ತಾರೆ:

  malenadina maleya kampa soosuva nimma kavite tumba chennagide 🙂

 2. Yashwanth ಹೇಳುತ್ತಾರೆ:

  very good imagination Sukesh….Keep it Up.

  -Yashwanth

 3. minchu ಹೇಳುತ್ತಾರೆ:

  title tumba chennagide nimma kaviteya hage……

 4. Pramod ಹೇಳುತ್ತಾರೆ:

  ಕವನ ನವೀನವಾಗಿದೆ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s