ರಾಜಹಂಸ

Posted: ಜುಲೈ 5, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:

ಬಿಯರನ್ನು ಜೋರಾಗಿ ಸುರೀಬೇಡ
ಬುಗು ಬುಗು ನೊರೆಯುಕ್ಕಿ ಚೆಲ್ಲುತ್ತದೆ.
ಕಹಿ ಒಗರು ಸತ್ಯದಂತಾ ಬಿಯರು
ಕುಲುಕಬೇಡ, ಬಿದ್ದಿರಲಿ ಸ್ತಬ್ಧ.

ಕಿವಿಗೆರಡು ಇಯರ್ ಫೋನು
ಚುಚ್ಚಿ ಕೂತುಕೋ ಏರಿಸುತ್ತಾ ವಾಲ್ಯೂಮು.
ಆಗಿಬಿಡು ಒಳಗಿಗೂ ಹೊರಗಿಗೂ ಕಿವುಡ.
ನೂರರಲ್ಲಿ ನುಗ್ಗುತ್ತಾ ಜಾರಲಿ
ಹಾರಲಿ ರಾಜಹಂಸ.
ಮುಚ್ಚಲೇ ಬೇಡ ಕಣ್ಣು
ಬಂದು ಬಿಟ್ಟೀತು ನಿದ್ರೆ
ಕನಸಲ್ಲಿ ಬಿಡದೇ ಕಾಡೀತು
ಒಳ ಹೊರಗಿನ ಹಳೆ ಹೊಸ ಹಾಡು.

ಕೆಳಗಿಳಿಯಲೇ ಬೇಡ
ತಲುಪುವ ತನಕ ಇರದ ಒಂದು ಗಮ್ಯ.
ಈ ಊರುಗಳಲ್ಲಿ ದಾರಿಗಳಲ್ಲಿ
ಸಂದುಗೊಂದುಗಳಲ್ಲೆಲ್ಲಾ ಕಾದು
ಕುಳಿತಿವೆಯಂತೆ ನೆನಪುಗಳು
ಮಸೆಯುತ್ತಾ ಕತ್ತಿ;
ನಿನ್ನೆಯಷ್ಟೇ ಬಂತು ವರದಿ.
ಕೆಳಗಿಳಿಯಬೇಡ; ಬಲಿಯಾಗಬೇಡ.

ಅಗೋ ನೋಡು
ಎದುರು ಸೀಟಲ್ಲೇ ಕೂತಿದ್ದಾನೆ
ಕೊರಮ ಲ್ಯಾಬ್ ಅಸಿಸ್ಟಂಟು.
ಕೈ ಚೀಲದ ತುಂಬೆಲ್ಲಾ
ಇದ್ದಾವು ನಿನ್ನ ಹಳೇ ಚರಿತ್ರೆ.
ಗುರುತು ಹಿಡೀಬೇಡ; ಮಾತಾಡಲೇಬೇಡ
ತೆರೆದಾನು ಕೈ ಚೀಲ
ಛೂ ಬಿಟ್ಟಾನು ನೆನಪುಗಳ
ಹೇಳುತ್ತಾ ಅವರಿವರು ಸತ್ತ
ಅವರಿವರಿಗೆ ಅವಳಿ ಮಕ್ಕಳಾದ ವಿಷಯ.

ಸುಮ್ಮನೇ ನೋಡು ಕಪ್ಪು
ಕಿಟಕಿಯಾಚೆ; ಕಾಣುವುದಿಲ್ಲ
ಏನೂ; ಕಾಣದಿರುವುದು ಎಷ್ಟು ಚಂದ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s