ಮೃತಸಮುದ್ರ

Posted: ಜುಲೈ 10, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ಕವಿತೆಯ ಅಪ್ಪ ಯಾರೆಂದು
ಕೇಳಬೇಡವೇ ಹುಡುಗಿ.
ಅದು ನೋವಾಗಿರಬಹುದು
ಇಲ್ಲಾ ನಲಿವಾಗಿರಬಹುದು.
ಕವಿತೆ ಹುಟ್ಟುವುದು ಹಾದರಕ್ಕೇನೆ!

ಮೆಕ್ ಡೋನಾಲ್ದಿನ ಭೂಪನ ನೋಡು
ಬೆದರುಗೊಂಬೆ ಅನ್ನಲಾರೆ ಅವನ.
ಅಕ್ಕ ಪಕ್ಕ ಕೂರುತ್ತವೆ
ನಿರ್ಭೀತ ಹಕ್ಕಿಗಳು; ಕೊಡುತ್ತ
ಫೋಟೋಗಳಿಗೆ ಪೋಸು.
ಇಂತಲ್ಲೂ ಹುಟ್ಟಬಹುದು
ಕವಿತೆಯೆಂಬ ಕೂಸು!

ಕವಿತೆ ಹುಟ್ಟಬಹುದು
ಸಿಗರೇಟಿನ ಹೊಗೆ ವರ್ತುಲಗಳಲ್ಲಿ.
ಕವಿತೆ ಬದುಕೀತು
ಬಾರಿನ ಕಮಟು ವಾಸನೆಯಲ್ಲೂ.
ಕವಿತೆ ಬೆಳೆದೀತು ಮೆಚ್ಚಿದರೂ
ಮೆಚ್ಚದ ಮಾತುಗಳಲ್ಲಿ.

ಸಿಹಿನೀರಲ್ಲಿ ಎಲ್ಲವೂ ಎಲ್ಲರೂ
ಮುಳುಗುತ್ತಾರೆ; ಸಾಂದ್ರಗೊಳಿಸು
ಬೆರೆಸುತ್ತಾ ಇಷ್ಟಿಷ್ಟೇ ಉಪ್ಪು.
ಕೊನೆಗೆ ಎಲ್ಲವೂ ತೇಲುತ್ತವೆ.
ನಿಧಾನಕ್ಕೆ ಹುಟ್ಟುತ್ತದೆ
ಒಂದು ಮೃತಸಮುದ್ರ.
ಬಂದರೂ ಬಂದೇನು ನಾನಲ್ಲಿಗೆ
ಬರೆದಾದ ಮೇಲೆ ಎಲ್ಲ ಕವಿತೆ
ಕವಿತೆ ಹುಟ್ಟಲಾರದು ಉಪ್ಪು ನೀರಲ್ಲಿ!

Advertisements
ಟಿಪ್ಪಣಿಗಳು
 1. vijayashree ಹೇಳುತ್ತಾರೆ:

  ಕವಿತೆ ಹುಟ್ಟಬಹುದು
  ನಾಯಿಯ ಬಾಲದ ಡೊ೦ಕಿನಲ್ಲೂ
  ಹರಯದ ಬೆಡಗಿಯ ಜಡೆಯಲ್ಲೂ
  ಕವಿತೆ ಹುಟ್ಟಲೂ ಬಹುದು
  ಭಟ್ಟರ ಕುಣಿಯುವ ಜುಟ್ಟಿನಲ್ಲೂ…:):)

 2. sukhesh ಹೇಳುತ್ತಾರೆ:

  @vijayashree: ಒಳ್ಳೆಯ ಸಾಲುಗಳು 🙂

  @ಪ್ರಮೋದ್: ಥ್ಯಾಂಕ್ಸ್ 🙂 ನಿಮ್ಮ blog ನೋಡಿದೆ. ತುಂಬಾ ಚೆನ್ನಾಗಿ ಬರೀತೀರ 🙂 ನಮ್ಮಂತ beginersಗೆ ಪ್ರೋತ್ಸಾಹ ಕೊಡ್ತಾ ಇರೋದಕ್ಕೆ ತುಂಬಾ ಥ್ಯಾಂಕ್ಸ್ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s