ವಿರಹಗೀತೆ

Posted: ಜುಲೈ 16, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ಬೋಳುಮರ
ವಸಂತದುಸಿರಂತೆ ಬಂದಾಗ ನೀ
ಕೋಗಿಲೆ ಹಾಡಿತ್ತು ಸೀತಾ ಸರ್ಕಲ್ಲಲ್ಲೂ.
ಮಳೆಯಿಲ್ಲದೆಯೂ ಮೂಡಿತ್ತು ಕಾಮನಬಿಲ್ಲು.

ಈಗ ಈ ಶಿಶಿರದಲ್ಲಿ
ಕೊಗಿಲೆಯೆಲ್ಲಿ?
ಚಿಗುರೆಲ್ಲಿ?
ಉಸಿರೆಲ್ಲಿ?
ಎಲ್ಲ ಅಳಿದಾಯ್ತು ನೀ
ತೊರೆದಂದೆ.

ಉರುಳುತ್ತವೆ ಇಬ್ಬನಿಗಳು
ಹೇಳುತ್ತಾ ಸಾಂತ್ವಾನ ಮೆಲ್ಲಗೆ.
ಉರುಳುತ್ತವೆ ಕಂಬನಿಗಳು
ಒಂದಾಗುತ್ತ ಮಣ್ಣೊಳಗೆ.

ತಡೆದಿದ್ದರೆ ಚೆನ್ನಿತ್ತು
ಇಬ್ಬನಿಗಳ; ಈ ಹನಿಗಳ.
ಹೇಗೆ ತಡೆಯಲಿ?
ಇದು ಚಳಿಗಾಲ
ಜೊತೆ ನೀನಿಲ್ಲ
ನಾನೊಂದು ಬೋಳುಮರ.

Advertisements
ಟಿಪ್ಪಣಿಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s