ಘನ-ದ್ರವ

Posted: ಜುಲೈ 17, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ಇಲ್ಲ ಕಣೆ, ರಾತ್ರಿ ಎರಡಾಯ್ತು
ಇನ್ನಿವತ್ತು ನಿದ್ದೆ ಇಲ್ಲ.

ಕಳೆದೆರಡು ಜನ್ಮದ್ದೂ ಬಾಯಾರಿಕೆ
ತಣಿವಷ್ಟು ಮಳೆ ಸುರಿದು
ಆರಡಿ ಈರನೇ ಅಬ್ಬಿಗುಂಡೀಲಿ ಮುಳುಗಿ
ಅರಬ್ಬೀ ಸಮುದ್ರ ಸೇರಿ
ಊರೆಲ್ಲ ನಿರಾಳ ನಿಟ್ಟುಸಿರಿಟ್ಟು
ಅರವತ್ತು ರೂಪಾಯಿ ಅಧಿಕೃತ
ಸಾರಾಯಿ ಕುಡಿದು ದಣಿದು ಮಲಗಿಯಾಗಿದೆ.
ಕವನ ಘನವೋ ದ್ರವವೋ ಇನ್ನೂ ಗೊತ್ತಾಗಿಲ್ಲ.

ರೇಡಿಯೋ ಕಿವಿಗಾನಿಸಿ ಕಾಯುತ್ತಿದ್ದಾನೆ
ಬಸ್ ಸ್ಟಾಂಡಿನ ತಾತ ಅವಳು
ಜಮಾನದಲ್ಲಿ ಹಾಡಿದ್ದ ಹಾಡಿಗಾಗಿ.
ನಾಳೆ ನನ್ನ ಹುಡುಗಿ ಮದುವೆ
ಉಡುಗೊರೆ ಕೊಡಲು ಏನೂ ಇಲ್ಲ.
ಬಿತ್ತಿ ಬಂದಿದ್ದೇನೆ ನಮ್ಮ ನೆನಪುಗಳ ದಾರಿಯುದ್ದ
ಬೆಳಗಾತ ಎದ್ದು ನೋಡಬೇಕು
ಅರಳಿದ್ದಾವು ಹೊಸ ಪಾರಿಜಾತ.

ಊರು ಹಳತಾಗುತ್ತಾ ಹೊಸತಾಗುತ್ತದೆ.
ಹಳೆ ಮನೆಗೆ ಹೊಸ ಮಾಲೀಕ
ಮತ್ತು ಹೊಸ ಗಣಕೀಕೃತ ವಾಸ್ತು;
ಗೋಲಿ ಆಡಿದ ರಸ್ತೆಗಳಿಗೆಲ್ಲ
ಕೂಲಿಗಾಗಿ ಕಾಳು ಟಾರು.
ಎಲ್ಲ ಬದಲಾಗುತ್ತ ಇರುವಾಗ
ನಾನೊಬ್ಬ ಕವಿತೆ ಕುಟ್ಟುತ್ತ
ಮಳೆಗೆ ಕೊಡೆ ಇರಬೇಕೋ
ಅಥವಾ ನೆನೆಯುವುದೇ ಚಂದವೋ
ಅಂತೆಲ್ಲ ವ್ಯರ್ಥ ಚಿಂತಿಸುತ್ತೇನೆ.

ಬಹುಷಃ…
ಮಳೆ, ಬಿಯರು ಇಲ್ಲದೆ ಬರೆದರೆ
ಆದೀತು ಕವನ ಘನ.
ಆದರೆ ಏನೂ ಇಲ್ಲದೆ ಹೇಗೆ ಬರೆಯಲಿ ನಾ?

Advertisements
ಟಿಪ್ಪಣಿಗಳು
  1. Saritha Nagaraj ಹೇಳುತ್ತಾರೆ:

    superb…..how you get inspired to write these………is it your reading habbit helped?

  2. sukhesh ಹೇಳುತ್ತಾರೆ:

    Reading habit helps to a great extent. It gives you a grip on the language. But the difficult thing is that you have to resist the influence of other writers when you write.

  3. Pramod ಹೇಳುತ್ತಾರೆ:

    ಏನೂ ಇಲ್ಲದಿದ್ದರೂ ಹೇಗೆ ಇದನ್ನು ಬರೆದಿರಿ 🙂 ಸೂಪರ್ ಮಾರಾಯ್ರೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s