ಮನಸು ಪ್ರೈವೇಟ್ ಬಸ್ಸು

Posted: ಜುಲೈ 22, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:, , , ,

ಅರೆ ನಿದ್ರೆ ಅರೆ ಎಚ್ಚರ
ನೇರಳೆ ಹಣ್ಣು ತಿಂದ ಕನಸು
ಧಡ್ ಎಂದು ಕಂಬಿಗೆ ತಲೆ ತಾಗಿದರೆ
ಗೊತ್ತಿಲ್ಲದೂರಲ್ಲಿ ಪಲಾಯನವಾದಿ ಪ್ರೈವೇಟ್ ಬಸ್ಸು.

ಬೀದಿ ಬದಿ ಮನೆಯಲ್ಲಿ
ಮಗು ಅಳುತ್ತಲೇ ಇರಬೇಕಂತಿಲ್ಲ.
ನದಿಗುಂಟ ನಡೆವಾಗ
ಕೆಂಪುಕಲ್ಲುಗಳನ್ನೇ ಏಕೆ ಆಯುತ್ತೀಯ?

ಹತ್ತಿ ಇಳಿದು ಸುತ್ತಿ ನುಲಿದು
ಸಾಗುವಾಗ ಎಡಕ್ಕೊಮ್ಮೆ ನೋಡು
ದಾರಿ ಇನ್ನೂ ಅಲ್ಲೇ ಸುತ್ತುತ್ತಿದೆ.
ದೂರದಲ್ಲಿ, ಮೈಲು ದೂರದಲ್ಲಿ
ನಡೆಯುತ್ತಿರುವುದು ನೀನೆ!

ಇಕೋ, ಈ ತಿರುವು ತಿರುಗುತ್ತಲೇ
ಮುಗಿಯುತ್ತೆ ಹಾಡ್ಯ
ನಿರೀಕ್ಷಿತ ಅಪಘಾತದಂತೆ ಸಿಕ್ಕುತ್ತೆ
ನಿಮ್ಮಜ್ಜನ ಊರಿನ ಏಕಾಕಿ ಬಸ್ ಸ್ಟಾಪು.
ಪೆಟ್ಟಿಗೆ ಅಂಗಡಿಯಲ್ಲಿ ಮೂವತ್ತರ ಕನ್ಯೆ
ಸಾಲು ಬಾಟಲಿಗಳಲ್ಲಿ ಮೂರೇ ತಿಂಗಳು ಹಳೆಯ
ಶೇಂಗಾ ಹುರಿಗಡ್ಲೆ ಚಕ್ಕುಲಿ ಕೋಡುಬಳೆ.

ಮನೆ ತುಂಬಾ ಮಕ್ಕಳು ಮತ್ತು
ಕಂ ಎನ್ನುವ ಹಳೇ ಸುಧಾ ತರಂಗ ಕರ್ಮವೀರ
ಅಗಲ ಕಣ್ಣು ಚಿಕ್ಕಿಯ ಅಭಿಜ್ಞಾನ ಶಾಕುಂತಲ.
ಅಟ್ಟದ ಮೇಲಿನ ಟ್ರಂಕು ತುಂಬಾ
ಅಮ್ಮ ಆಡಿ ಬಿಟ್ಟ ಮಣಿ ಗೊಂಬೆ.
ಎಂದೂ ನೋಡಿರದ ಅಜ್ಜನ ಹಾರ್ಮೋನಿಯಮ್ಮು
ಮಾಸಿದ ಯಕ್ಷಗಾನದ ಕಿರೀಟ.

ಸಿಗ್ನಲ್ಲುಗಳಿಲ್ಲದ ಈ ಊರಲ್ಲಿ
ಯರ್ರಾಬಿರ್ರಿ ನುಗ್ಗುತ್ತದೆ ಮನಸ್ಸು.
ಮನಸೂ ಒಂದು ಪ್ರೈವೇಟ್ ಬಸ್ಸು.

Advertisements
ಟಿಪ್ಪಣಿಗಳು
 1. Saritha Nagaraj ಹೇಳುತ್ತಾರೆ:

  Nice one…….i really felt that i am in my grand ma’s home……….did you feel the same, while writing this?

 2. Pramod ಹೇಳುತ್ತಾರೆ:

  ಹೌದು. ಮನಸ್ಸು ಎನ್ನೋದು ಪ್ರೈವಟ್ ಬಸ್ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ, ಗೇಟಿದ್ದರೂ ನುಗ್ಗುತ್ತದೆ, ಜ೦ಪ್ ಹೊಡೆಯುತ್ತದೆ. ಹಕ್ಕಿಯ೦ತೆಯೂ ಹಾರುತ್ತದೆ. ಒಳ್ಳೆಯ ಕವನ

 3. ವಿಜಯರಾಜ್ ಕನ್ನಂತ ಹೇಳುತ್ತಾರೆ:

  laaykittu 🙂

 4. ರಾಘವೇಂದ್ರ ಹೆಗಡೆ ಹೇಳುತ್ತಾರೆ:

  ಹತ್ತಿ ಇಳಿದು ಸುತ್ತಿ ಸಾಗುತ್ತಾ
  ಕಾಣದ ಕನವರಿಕೆಯ ಅರಸುತ್ತದೆ ಹೆಡ್ ಲ್ಯಾoಪು ಡಿಂ-ಡಿಪ್ಪು ಮಾಡುತ್ತಾ
  ಮತ್ತೊಂದು ಬದಿ ಈಗ ಕಾಣುತ್ತ
  ಎಂದು ಮನಸೆಂಬ ಪ್ರೈವೇಟ್ ಬಸ್ಸು …

  ನಿಮ್ಮ ಕವನ ಆಪ್ತವಾಗಿದೆ. 🙂

 5. sukhesh ಹೇಳುತ್ತಾರೆ:

  Thanks all 🙂

  @sari: of course 🙂

 6. Lokesh B. ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ,
  ಬಸ್ ಹೋಗಿ ಮೆಟ್ರೋ ರೈಲು ಬಂತು ನೋಡಿ..
  ಆದರೂ ಮನಸಿನ ಏಳುಬೀಳಿನ ಓಟ ನಿಮ್ಮ ಕವನದಂತೆ ಎಂದಿಗೂ ಪ್ರೈವೇಟ್ ಬಸ್ಸೇ ಸರಿ.

 7. […] ದಿಕ್ಕಿಲ್ಲ, ಮನಸ್ಸೆ೦ಬುದು ಪ್ರೈವೇಟ್ ಬಸ್. ನಮ್ಮ ಮನಸ್ಸಿಗೆ ಲಗಾಮು ಹಾಕುವುದು, […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s