ಮೂರು ಜಡೆಯ ಹುಡುಗಿ

Posted: ಡಿಸೆಂಬರ್ 23, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ಅಲೆಗಳಲ್ಲಿ ಕರಗಿದ ಸಕ್ಕರೆ ಮೂಟೆಯೇ
ನುಸುಳಿ ಬಿಡುತ್ತೀ ನೀ ಒಮ್ಮೊಮ್ಮೆ
ಮಂಜಿನೊಳಗೆ
ಬೆಳ್ಳಂಬೆಳ್ಳಗಿನ ಕೆಮ್ಮಿನ ಹಾಗೆ

ಋತುಗಳು ತಿರುಗುತ್ತಲೇ ಇರುತ್ತವೆ.
ಇಬ್ಬನಿಗೆ ಮಳೆಯ ಧ್ಯಾನ
ಮಳೆಹನಿಗೋ…
ಕಾಮನಬಿಲ್ಲಿನ ಕನಸು
ಕವಿತೆ ಹುಡುಕುತ್ತಲೇ ಸಾಯುತ್ತದೆ
ಕಳೆದುಹೋದ ಸಾಲ

ಎಳ್ಳಮಾವಾಸ್ಯೆ ಜಾತ್ರೆಯಲ್ಲಿ
ಕಳೆದ ಕಾರು
ಮಿನರ್ವಾ ಸಿಗ್ನಲ್ಲಲ್ಲೊಂದು
ಬಾರು
ಪ್ರಾಸಕ್ಕೆ ಖಂಡಿತಾ ಕಾಯಲಾರವು
ಪಲ್ಸರು ಮತ್ತು ಅಲ್ಸರು

ಮೊನ್ನೆ ಹೀಗೆ
ಸತ್ತ ಕವಿತೆಯೊಂದು
ನಳನಳಿಸಿ ಗೊರಿಯಿಂದೆದ್ದು
ತನಗೆ ತಾನೇ ರಾಗವೊಂದ
ತೊಟ್ಟು
ಹಾಡಿಬಿಟ್ಟಿತಲ್ಲಾ…

ಗುಟ್ಟಿನ ವಿಚಾರ…
ಕಳೆದ ಸಾಲೊಂದು ಸಿಕ್ಕಿತಂತೆ
ಮುರಿದ ಕಾಲು ಬೆಳೆದಂತೆ…

ಆದರೂ…

ಮಳೆ ಹೂಗಳಿಲ್ಲದೀ ಶಿಶಿರದಿ
ಕಾಯುತ್ತದೆ ಒಂಟಿ ರೆಕ್ಕೆ ಹಕ್ಕಿ
ಬರಲಾರದ ತುಂಬಿಯ.
ಬಂದೀತಾದರು ಹೇಗೆ
ಮಗ್ಗಿ ಮರೆಸಿದ ಹುಡುಗಿ ನೀ
ಹಸೆಯೇರಿದಾಗ?

Advertisements
ಟಿಪ್ಪಣಿಗಳು
  1. Tina ಹೇಳುತ್ತಾರೆ:

    ಸುಖೇಶ್,
    ಕವಿತೆ ಎಷ್ಟು ಇಷ್ಟವಾಯಿತೂ ಅಂತಂದರೆ..ಹೊಟ್ಟೆ ಉರಿ ತಡ್ಕೊಳೊಕಾಗ್ತಿಲ್ಲ!!
    ಭಾಳ ಚೆನ್ನಾಗಿ ಬರೀತೀರಿ.

  2. Pramod ಹೇಳುತ್ತಾರೆ:

    ಓದುತ್ತಾ ಹೋಗುತ್ತಿದ್ದ೦ತೆ ಮುಖದಲ್ಲಿ ಖ೦ಡಿತವಾಗಿಯೂ ‘ಮೂಡಿ’ ಬರುವ ಮ೦ದಹಾಸಕ್ಕೆ ನಿಮ್ಮ ಕ’ವ’ನವರಿಕೆಯೇ ಕಾರಣ

  3. ರಂಜಿತ್ ಹೇಳುತ್ತಾರೆ:

    ಈ ಕವಿತೆ ಸಕ್ಕತ್ತು… ಮೊದಲೇ ನಾ ನಿಮ್ಮ ಫ್ಯಾನು…. ಇದು ಅದಕ್ಕೆ… ನಾಲ್ಕನೆ ರೆಕ್ಕೆ..:

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s