ಆಯತ ಮತ್ತು ವೃತ್ತ

Posted: ಜನವರಿ 17, 2012 by sukhesh in ನನ್ನ ಕವಿತೆ
ಟ್ಯಾಗ್ ಗಳು:, ,

ಉತ್ತರಗಳ ಮೇಲೆ ತೇಲುತ್ತಾ ಇದೆ
ಒಂದು ಪ್ರಶ್ನೆ

ಯಾಕಾದರೂ ಬಂದೆ ನೀ
ತಣ್ಣನೆಯದೊಂದು ಮೋಡದ ಮೇಲೆ
ಇಂತಾದ್ದೊಂದು ನಗು ಚೆಲ್ಲುತ್ತಾ?
ಯಾಕಾದರೂ ಇರಬೇಕು
ಆಯತದೊಳಗೊಂದು ವೃತ್ತ?

ಎಲ್ಲಾ ಊರುಗಳದ್ದೂ
ಒಂದೇ ಮುಖ
ಹೆದ್ದಾರಿಗೊಂದು ಪೆಟ್ಟಿಗೆ
ಅಂಗಡಿ
ಪಡಸಾಲೆಯಲ್ಲಿ ಚೌಕಾಬಾರ
ಅಥವಾ ಮೂರೆಲೆ
ಕಾಲದೂಡಲು ಯಾವುದೋ ಒಂದು ಆಟ

ಹಿಂಬಾಗಿಲ ಬಣ್ಣಗಳೇ ಬೇರೆ
ಎಲ್ಲವಕ್ಕೂ ಬೇರೆಯದೇ ಚಿತ್ತಾರ
ಒಂದೊಂದರಲ್ಲೂ ನಮ್ಮವೇ ಆದ
ನೂರೊಂದು ಸ್ವರ

ಮುಂಬಾಗಿಲು ಹಿಂಬಾಗಿಲು ಒಂದೇ ಇರಲಾರದೆ?

ಮೈಲುಗಳ ಲೆಕ್ಕ ಇಟ್ಟರೆ
ಒಂದಿಷ್ಟು ದೂರಗಳು ಕರಗುತ್ತಾ
ಮತ್ತಷ್ಟು ದೂರಗಳು ಚಿಗುರುತ್ತಾ
ಕೊನೆ ಬಂದದ್ದೆ ತಿಳಿಯದು.

ಕೊನೆಗೂ ಒಂದು ಮೈಲಿಗಲ್ಲು ಇದ್ದೀತೆ?

ಬಾಲ ಕುಣಿಸೋ ಹಕ್ಕಿ
ಹೆಕ್ಕುತ್ತಾ ಕಾಳು ಕುಕ್ಕಿ ಕುಕ್ಕಿ;
ತತ್ವಜ್ಞಾನಿಯೇ ಇರಬೇಕು ನೀ
ನಿನಗಾದರೂ ಗೊತ್ತೇ?

ಎಲ್ಲವಕ್ಕೂ ಆಯತ, ವೃತ್ತ ಮತ್ತು ನಗು
ಉತ್ತರ ಆದೀತೆ?

Advertisements
ಟಿಪ್ಪಣಿಗಳು
  1. Sachetan ಹೇಳುತ್ತಾರೆ:

    ಮುಂಬಾಗಿಲು ಹಿಂಬಾಗಿಲು ಒಂದೇ ಇರಲಾರದೆ?

    ಮೈಲುಗಳ ಲೆಕ್ಕ ಇಟ್ಟರೆ
    ಒಂದಿಷ್ಟು ದೂರಗಳು ಕರಗುತ್ತಾ
    ಮತ್ತಷ್ಟು ದೂರಗಳು ಚಿಗುರುತ್ತಾ
    ಕೊನೆ ಬಂದದ್ದೆ ತಿಳಿಯದು.

    superrrr

  2. sukhesh ಹೇಳುತ್ತಾರೆ:

    ಎಲ್ರಿಗೂ ತುಂಬಾ ಥ್ಯಾಂಕ್ಸ್ 🙂
    ಇದ್ರಲ್ಲಿ ಮುಂಚೆ ಒಂದು ತಪ್ಪಿತ್ತು. ‘ಆಯತ’ದ ಬದ್ಲು ‘ಆಯಾತ’ ಆಗಿತ್ತು. ಅದೂನು ಕವಿತೆ ಶೀರ್ಷಿಕೆನಲ್ಲಿ 😦 ಗಮನಕ್ಕೆ ತಂದಿದ್ದು ರಂಜಿತ್ ಸರ್… ಅವರಿಗೊಂದು ದೊಡ್ಡ ಥ್ಯಾಂಕ್ಸ್ 🙂
    @ಕನ್ನಂತ್ ಸರ್: ಅಣಕ ಬರೆಯೋದು ಕವಿತೆ ಬರೆಯೋದಕ್ಕಿಂತಾ ಕಷ್ಟದ ಕೆಲಸ… ನಾನು try ಮಾಡಿ ನನ್ನ ಕೈಲಿ ಆಗೋಲ್ಲ ಅಂತ ಬಿಟ್ಟಿದ್ದು 🙂 ಅದೂನು ನೀವು ಬರೆಯೋ ತರ ಬರೆಯೋಕಂತೂ impossible

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s