ಉಳಿದೇ ಹೋದ ಹನಿಗಳು

Posted: ಜನವರಿ 20, 2012 by sukhesh in ನನ್ನ ಕವಿತೆ
ಟ್ಯಾಗ್ ಗಳು:, ,

-೧-
ಪ್ರೀತಿಯೆಂದರೆ
ಪುಸ್ತಕದ ನಡುವಿಟ್ಟ ಹಳದಿ ಹೂ ಪಕಳೆ
ಹನಿ ಹನಿಯಲ್ಲಿ ಮಿಂದ ಜೇಡರ ಬಲೆ
ಯಾತಕ್ಕೋ ತಿರುಗೋ ಏಕಾಂಗಿ ಇಳೆ

-೨-
ನಾ ಹೀಗೆಯೇ
ಪ್ರಾಸವಿಲ್ಲದ ಕವಿತೆಯಂತೆ
ಸ್ವರಗಳಿಲ್ಲದ ರಾಗದಂತೆ
ಕೊಟ್ಟು ಬಿಡುತ್ತೇನೆ ನನ್ನ ನಿನಗೆ
ಬರೆದು ಹಾಡಿಬಿಡು
ಹುಟ್ಟುತ್ತೇನೆ ನಿನ್ನ ಕಂಗಳೊಳಗೆ

-೩-
ಕನಸು…
ಹೆದ್ದಾರಿ ಖಾಲಿ ಇರುತ್ತಾ ನಿಧಾನ
ಸರ್ವಿಸ್ ರೋಡಲ್ಲಿ ಹೋಗೋದು
ಅರ್ಧ ರಾತ್ರೀಲಿ ಎದ್ದು
ಬುದ್ಧ ಆಗೋದು
ಸುಮ್ಮನೆ ಒಂದಿನ ಕದ್ದು
ಹಣೆಗೊಂದು ಮುತ್ತು ಕೊಡೋದು

-೪-
ಇಬ್ಬನಿಯೆಡೆ ಬಣ್ಣದ ಬೆಳಕು
ಚೆಲ್ಲುವ ದೀಪಗಳೇ
ಕಾಮನಬಿಲ್ಲು ಆಸ್ಪತ್ರೆಯಲ್ಲಿ ಹುಟ್ಟಿದ್ದು
ಪಕ್ಕಾ ಸುಳ್ಳು

ಟಿಪ್ಪಣಿ: ಇವೆಲ್ಲ facebook ನಲ್ಲಿ ಆಗಾಗ ಹಾಕಿದ್ದ status ಗಳು. ಮೆಚ್ಚಿದ, ಕಾಮೆಂಟ್ ಮಾಡಿದ ಗೆಳೆಯರಿಗೆ ಒಂದು ಥ್ಯಾಂಕ್ಸ್…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s