ನನ್ನೊಳಗಿನ ಉಗ್ರ

Posted: ಜನವರಿ 30, 2012 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ನನ್ನೊಳಗಿನ ಉಗ್ರ ಬಣ್ಣದ ಧ್ವಜದೆಡೆ
ನಿಲ್ಲದೆ ನಡೆಯುತ್ತಾನೆ
ಮರದ ಟೇಬಲ್ಲು ಎತ್ತರ ಜಾಸ್ತಿ ಅಂತ
ಗೊಣಗುತ್ತಾನೆ

ನನ್ನೊಳಗಿನ ಉಗ್ರ ಕೊಡಬೇಕಾದ
ಅಸಲಿಗೆ ಬಡ್ಡಿಯ ಲೆಕ್ಕ ಮರೆಯುತ್ತಾನೆ
ಜನವರಿಯಲ್ಲಿ ಬಾರದ ಮಳೆ
ಮತ್ತು ನಿಲ್ಲದ ಚಳಿಗೆ ಶಪಿಸುತ್ತಾನೆ

ನನ್ನೊಳಗಿನ ಉಗ್ರ ನಿನಗಾಗಿ
ಲಿಫ್ಟುಗಳಲ್ಲಿ ಕಾಯುತ್ತಾನೆ
ಎದುರಾದಾಗ ಮಂಕಾಗುತ್ತಾನೆ
ನಗಲಾರದೆ ಅಳುತ್ತಾನೆ

ನನ್ನೊಳಗಿನ ಉಗ್ರ ನೂರಕ್ಕೆ
ನೂರಿಪ್ಪತ್ತು ಮಾರ್ಕ್ಸು ಗಳಿಸುತ್ತಾನೆ
ಕ್ಯಾಲ್ಕುಲೇಟರಿಗೆ ಬ್ಯಾಟರಿ ಹುಡುಕುತ್ತಾ
ರಾತ್ರಿಗಳ ಕಳೆಯುತ್ತಾನೆ

ನನ್ನೊಳಗಿನ ಉಗ್ರ ಹುಡುಕುತ್ತಾನೆ;
ಪಡೆಯುತ್ತಾನೆ; ಕಳೆಯುತ್ತಾನೆ ಮತ್ತು
ಕಳೆದದ್ದ ಮರೆತಂತೆ ನಟಿಸುತ್ತಾನೆ
ನಟಿಸುತ್ತಾ ಪಡೆಯುತ್ತಾನೆ

ನನ್ನೊಳಗಿನ ಉಗ್ರ ಪಾಸ್ ಪೋರ್ಟುಗಳ
ಹರಿದೆಸೆಯುತ್ತಾನೆ ಮತ್ತು
ಎಂದೂ ಮುಳುಗದ ಹಡಗಿಗೆ
ಕಾಯುತ್ತಾ ಮರಳಲ್ಲಿ ಪುಟ್ಟ ಗೂಡು ಕಟ್ಟುತ್ತಾನೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s