ಸತ್ತ ಕ್ರಾಂತಿಕಾರಿಯ ಕನಸುಗಳು

Posted: ಫೆಬ್ರವರಿ 8, 2012 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ಬುರ್ಖಾ ಸುಂದರಿಯ ಕಂಗಳು
ಪಾರಿವಾಳದ ರೆಕ್ಕೆಗಳು
ಅರಳುತ್ತಿದ್ದಂತೆ
ಎಲ್ಲೋ ಒಂದೆಡೆ
ಗುಲ್ಮೊಹರೊಂದು ಚಡಪಡಿಸಿ ನರಳಿ
ಮೆಲ್ಲಗೆ ಕೆಂಪು ಕೆಂಪು ರಕ್ತದ
ಹನಿ ಬಸಿದು
ಹೂವೊಂದ ಅರಳಿಸಿ…

ಮತ್ತೊಂದು ಮೇ ಬರುವ ಸೂಚನೆ
ಸುಸ್ಪಷ್ಟ
ಹೊಸ ಕರವಸ್ತ್ರಗಳ ಕೊಳ್ಳಬೇಕಾಗಿದೆ

ನೆಪಮಾತ್ರದ ಟಾರು ರಸ್ತೆ ಮೇಲೆ ಹೊಸ
ಕಾರುಗಳು ಓಡಾಡುವಾಗ
ಗಣಕ ಯಂತ್ರದ ಮೇಲೊಂದಷ್ಟು
ಬಿಸಿ ಧೂಳು
ಬಿಳಿ ಮೋಡಕ್ಕೂ ಚೂಪು ಚೂಪು
ಈಟಿ ಎಸೆವ ಬೆಳ್ಳಿ ದೇವದಾರುಗಳು
ಮೂರು ಸಾವಿರದ ಕೊಡಲಿಗಳಿಗೆ
ಶರಣಾಗುವಾಗ
ಕನಸು ಹೊತ್ತ ಹದಿನಾರರ ಮನಸು
ಕ್ರಾಂತಿ ಎಂಬ ಅಪರಾಧ ಎಸಗುತ್ತಾ
ಮೆಲ್ಲಗೆ ಕಾಣೆಯಾಗುತ್ತದೆ

ಹದಿನಾರರಲ್ಲಿ ಕಲ್ಲು ತೂರಿದ ಬಸ್ಸು
ಹಳೆಯದೇ ದಾರಿಯಲ್ಲಿ ನುಲಿಯುತ್ತಾ ಸಾಗುವಾಗ
ಮನಸು ವಿದೇಶಿ ಕಾಫಿ ಹೂ
ಮೇಲಣ ಸ್ವದೇಶೀ ದುಂಬಿ
ಜೋಗುಳಕ್ಕೆ ನಿದ್ರಿಸುತ್ತದೆ
ಚಿಟ್ಟೆ ಚಿತ್ತಾರದ ಕನಸುಗಳ
ನಡುವೆ ತೇಲುವಾಗ
ಹದಿನಾರರ ಕ್ರಾಂತಿಕಾರಿ ಕೊಲೆಯಾಗಿ
ಬೆಚ್ಚಿ ಬೆವರುತ್ತದೆ
ತಟ್ಟಿ ಮಲಗಿಸುವವರಾರು?

ನಿನ್ನ ಮೊಮ್ಮಗಳ ಮದುವೆಗೆ
ಆಮಂತ್ರಣ ಪೋಸ್ಟಿನಲ್ಲೇ ಬರುತ್ತದೆ
ಬೀಪಿ ಶುಗರ್ರು ಮತ್ತು
ಒದ್ದೆ ಕಂಗಳು ಓದಲಾರದಾದಾಗ
ಹೊಸ ಫ್ರೇಮಿನ ಕನ್ನಡಕ ಅಣಕಿಸುತ್ತದೆ
ಸದ್ದು ಸತ್ತ ಕಾರಿಡಾರುಗಳಲ್ಲಿ
ದಾದಿಯರ ಗೆಜ್ಜೆಗಳ ಆಕ್ರಂದನ
ಅತ್ತರೋ ನೆತ್ತರೋ ತಿಳಿಯದ ವಾಸನೆಗೆ
ಕೂತಲ್ಲೇ ತೂಕಡಿಕೆ
ಎಲ್ಲಕ್ಕೂ ಬಿಳಿ ಕಸದ ಬುಟ್ಟಿಯದೇ ಸಾಕ್ಷಿ
ಎಲ್ಲಿ ಹೋದ ಇವ ಸರ್ಕಾರಿ ವೈದ್ಯ?

ಹದಿನಾರರ ಕನಸುಗಳ ಸಾಸಿವೆ
ಜೊತೆ ಹಾಕಿ ಒಗ್ಗರಿಸಿದರೆ
ಸಾರಿಗೆ ಉಪ್ಪು ಖಾರ ತುಸು ಹೆಚ್ಚೇ!

Advertisements
ಟಿಪ್ಪಣಿಗಳು
  1. ರಾಘವೇಂದ್ರ ಜೋಶಿ ಹೇಳುತ್ತಾರೆ:

    ಆಹಾ..ನಿಜಕ್ಕೂ ಒಳ್ಳೆಯ ಸಾಲುಗಳು.ಕುಸುರಿ ಕೆಲಸ!

  2. Venkatraman ಹೇಳುತ್ತಾರೆ:

    ishtavaytu kavite.. haage nimma barahagaluu..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s