ಕವಿತೆಯೆಂಬ ಮಳೆ ಕೊಯಿಲು

Posted: ಮೇ 21, 2013 by sukhesh in ನನ್ನ ಕವಿತೆ
ಟ್ಯಾಗ್ ಗಳು:, ,

ಮೇ ಮಳೆ

ಮಿಂದ ಇಳೆ

ತೊಳೆದು ಕೊಳೆ

 

ಅಂತ ಪ್ರಾಸಬದ್ದ ಬರೆದು

ಕುಳಿತೆ

ಆಯಾಸ ಒಂದಿಷ್ಟು ತಲೆನೋವು

ಈ ಮಳೆಯದೊಂದು ನಿಲ್ಲದ

ಗೋಳು

 

ಹೀಗೆಲ್ಲ ಅರ್ಥಹೀನ ಸುರಿವಾಗ

ಫುಟ್ಪಾತ್ ಚಾಕಲೇಟು ಕವರು

ಹಳೆ ಪ್ರಜಾವಾಣಿ ಪೇಪರುಗಳ

ಜೊತೆ ತೊಳೆದು ಬರುವ

ನೆರಳುಗಳು

ಹನಿಗಳ ಅಬ್ಬರಕ್ಕೆ

ಹೈ ಫೈ ಗಾಜು ಮಬ್ಬಾಗುತ್ತದೆ

ಇದ್ದಕ್ಕಿದ್ದಂತೆ ಪುರಾತನವಾಗುವ

ನಾನು ಗಾಜಿನಾಚೆ

ಚಲಿಸುವ ಬಿಂಬಗಳ ದಿಟ್ಟಿಸುತ್ತೇನೆ

 

ಸಂಜೆಮಳೆಯ ಈ ದಿನಗಳಲ್ಲಿ

ನಿನ್ನ

ಕೇಶರಾಶಿಯ ವಿಹ್ವಲತೆಗೆ

ಪಡುವಣದ ಗಾಳಿಯೇ ಕಾರಣವಿರಬೇಕು

ನಾಲ್ಕು ದಿಕ್ಕಲ್ಲೂ

ದಿಕ್ಕಾಪಾಲು ಹನಿಗಳು

ಭಾಷ್ಪೀಕರಣದ ಕತೆ ಹೇಳಿದ ಟೀಚರಾದರೂ ಎಲ್ಲಿ?

 

ಕಿಟಕಿಯಲ್ಲಿ ನೆಂದ

ಗುಲ್ಮೊಹರುಗಳ ಸಾಲು

ದಿಗಂತದಲ್ಲಿ

ಮಿಂಚಿನ ಕೋಲು

ಮೋಡದ ಮೇಲೆಲ್ಲೋ

ನೀನೇ ಚಲಿಸಿ ಒಮ್ಮೆ ನಕ್ಕು…

ಬೆಳೆದು ನಿಂತ ಅಂತರಕ್ಕೆ ನಿಟ್ಟುಸಿರು

ಊರ ತುಂಬ ಕವಿತೆಯೆಂಬ ಮಳೆ ಕೊಯಿಲು

Advertisements
ಟಿಪ್ಪಣಿಗಳು
  1. Pramod ಹೇಳುತ್ತಾರೆ:

    ಸೂಪರ್, ನಿನ್ನೆಯ ಮಳೆಯ೦ತೆಯೇ ಅಚಾನಕ್ ಅದ್ಭುತ 🙂

  2. ರಂಜಿತ್ ಹೇಳುತ್ತಾರೆ:

    ಅಂಥ ಒಂದು ಜೋರು ಮಳೆಯಲ್ಲಿ
    ಇಂಥ ಒಂದು ಕವಿತೆಯ ಸಾಲುಗಳನು
    ತೊಳೆದ ನೀರು ಹಾಗೇ ಹರಿದು ಬಂದು
    ನನ್ನೊಡಲನು ನನ್ನೊಳಗನು ತಂಪು
    ಮಾಡೀತೆಂಬ ಭರವಸೆಯಲಿ
    ಬರಿಗಾಲಲಿ ನಡೆಯುತ್ತೇನೆ
    ಹರಿವ ಹೊಳೆಯಂಥ ರಸ್ತೆಯ ತುಂಬಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s