About

ಹೆಸ್ರು ಸುಖೇಶ್. ಫ್ರೆಂಡ್ಸು ಸಾಧಾರಣವಾಗಿ ಈ ಹೆಸ್ರು use ಮಾಡಲ್ಲ. ಬದ್ಲಾಗಿ ಚಂದ ಚಂದ (?) ಇರೋ ಸಾವಿರ ಹೆಸರಿಂದ ಕರೀತಾರೆ. ನೀವು ಬೇಕಾದ್ರೆ ಸುಖಿ (? 😦 !) ಅಂತ ಕರೀರಿ. ಇಲ್ಲ ಸುಖೇಶ್ ಅಂದ್ರೂ ನಡಿಯುತ್ತೆ. ನೀವು ಇನ್ನೂ creative ಆಗಿದ್ರೆ ಬೇರೆ ಯಾವ್ದಾದ್ರು ಚಂದದ ಹೆಸರು ಇಟ್ಟರೂ ok 🙂

ನಾನೂ ಬೆಂಗಳೂರಲ್ಲಿ ಇರೋ ಸಾವ್ರಾರು ಟೆಕ್ಕಿಗಳಲ್ಲಿ ಒಬ್ಬ. ದಿನಾ ಬೆಳಿಗ್ಗೆ ಎದ್ದು ಆಫೀಸಿಗೆ ಹೋಗೋದು, ಟೀ ಕಾಫಿ ಕುಡೀತ ಟೈಂಪಾಸ್ ಮಾಡೋದು, ಮತ್ತೆ ಮನಸು ಬಂದಾಗ ಸಕ್ಕತ್ತಾದ (?) ಒಂದೆರಡು ಲೈನ್ ಪ್ರೋಗ್ರಾಮು ಬರೆಯೋದು, ಅಗತ್ಯ ಬಂದಾಗ software fault ಗಳನ್ನ fix ಮಾಡೋದು ಇಂತವುಗಳ ಮದ್ಯಾನೆ ಜೀವನ ಕಳೆಯೋನು. ಹಂಗಂತ ಈ ಲೈಫ್ ಸ್ಟೈಲ್ ಬಗ್ಗೆ ಏನೂ ಬೇಜಾರಿಲ್ಲ.

ಮೊದಲ್ನಿಂದ ನಾನು ಒಂತರ ಪುಸ್ತಕದ ಹುಳು ಅಂತಾರಲ್ಲ, ಹಾಗೆ. ಇರೋ ಬರೋ ಪುಸ್ತಕಗಳನ್ನೆಲ್ಲ ಅರ್ಥ ಆಗುತ್ತೋ ಇಲ್ವೋ ನೋಡದೆಲೆ ಓದೋ ಜಾತಿ. ತೇಜಸ್ವಿ, ಕಾರಂತ, ಭೈರಪ್ಪ, ಕಾಯ್ಕಿಣಿ ಇವರೆಲ್ಲ ಚಿಕ್ಕ ವಯಸ್ನಲ್ಲೇ ಪುಸ್ತಕಗಳ ಮುಖಾಂತರ ಪರಿಚಯ ಅದ್ರು. ಯಾರು ಎಷ್ಟು ಅರ್ಥ ಆಗಿದಾರೆ ಅನ್ನೋದು ದೇವರೇ ಬಲ್ಲ.

ಓದೋದರ ಜೊತೆ ಹಾಡುಗಳನ್ನ ಕೇಳೋ ಹುಚ್ಚೂ ಇದೆ. ರಾಕ್ ಮ್ಯೂಸಿಕ್ ಅಂದ್ರೆ ಸ್ವಲ್ಪ ಅತಿ ಅನ್ನಿಸುವಷ್ಟು ಇಷ್ಟ. ಜೊತೆಗೆ ಭಾವಗೀತೆಗಳು, ಸಿನಿಮ ಹಾಡುಗಳು, ಆಗಾಗ ಹಿಂದೂಸ್ತಾನಿ ಎಲ್ಲ ಕೇಳ್ತಾ ಇರ್ತೀನಿ. ಪೋಸು ಕೊಡೋಕೆ ಅಂತ ಒಂದು ಗಿಟಾರ್ ಬೇರೆ ಇಟ್ಕೊಂಡಿರೋದ್ರಿಂದ ಆಗಾಗ ಪಕ್ಕದ ಮನೆಯವರ ಹತ್ರ ಬೈಸ್ಕೊಳ್ತಾನೂ ಇರ್ತೀನಿ 🙂

ಇದು ನಂದೇ ಬ್ಲಾಗು (ನಾನು, ನಂದು ಅನ್ನೋದನ್ನ ಬಿಡ್ಬೇಕಂತೆ. ಸಧ್ಯಕ್ಕೆ ನನ್ ಕೈಲಿ ಬಿಡೋಕೆ ಆಗ್ತಿಲ್ಲ). ಎರಡು ಮೂರು ಸಲ ಬರೆಯೋಕೆ ಶುರು ಮಾಡಿ ಬೇಡ ಅಂತ ಬಿಟ್ಟವನು ಕೊನೆಗೆ ಬ್ಲಾಗ್ ಲೋಕ ನೋಡಿದ ಮೇಲೆ ಬರೆಯೋದು ಬೇಡವೇ ಬೇಡ, ಟೈಪ್ ಮಾಡೋದೇ ಸರಿ ಅಂತ ಇಂತದ್ದೊಂದು ಕೆಲಸಕ್ಕೆ ಇಳ್ದಿದೀನಿ. ಇಲ್ಲಿ ನನ್ನ ಹಳೆಯ, ಹೊಸದಾದ ಕೆಲವು ಬರಹಗಳನ್ನ publish ಮಾಡೋ scheme ಇದೆ. ನೀವು ದಯವಿಟ್ಟು ನಿಮ್ಮ ಪ್ರೋತ್ಸಾಹವನ್ನೂ, ಕಾಮೆಂಟುಗಳನ್ನು ಕೊಡಬೇಕು.

ಪ್ರೀತಿಯಿಂದ
ಸುಖಿ

ಟಿಪ್ಪಣಿಗಳು
 1. chukkichandira ಹೇಳುತ್ತಾರೆ:

  ಕವಿತೆಗಳು ಚೆನ್ನಾಗಿವೆ…

 2. CanTHeeRava ಹೇಳುತ್ತಾರೆ:

  When did you write your poems? I am sure at least some of these are as old as you and I are. There are at least a couple that really deserved a better place to publish. We don’t have Maasti’s jeevana anymore. I would have loved to publish some of mine under his editorship.

 3. sukhesh ಹೇಳುತ್ತಾರೆ:

  Some are a bit old. A few were there in my diary for some years 🙂
  Did he run some magazine? Unfortunately I haven’t heard of it. Masti to me means only stories.

 4. CanTHeeRava ಹೇಳುತ್ತಾರೆ:

  I haven’t seen a copy of ‘jeevana’ myself. However, I have heard many leading living Kannada poets (the generation of G S Shivarudrappa, Chennaveera KaNavi and others) fondly talk about that magazine. Maasti was much more than a short story wizard. Another that comes to my mind is ‘prabuddha karNaataka’. Again, no longer exists. But, those magazines really helped some of the great kannada poets to come up. I am not sure whether internet can do that. We can write blogs. I do. But, I am not sure whether we could really have people like maasti or pu.ti.na reading us and giving us suggestions on the internet. Let us hope for the best.

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nice kavitegalu….liked very much

 6. veda ಹೇಳುತ್ತಾರೆ:

  Avadhiyalli nimma kavithegalannodi, nimma blognalli inukide, chandada kavithe barediddiri Sukhesh. Heege bareyuttiri.

 7. ರಂಜಿತ್ ಹೇಳುತ್ತಾರೆ:

  As I told before, Im fan of your writing. Could you pls provide e-mail ID?

  Also pls send the poems to the Magazines.. let more people read n enjoy your beauty of writing..

 8. sukhesh ಹೇಳುತ್ತಾರೆ:

  @ranjith: sir, i am more than happy to listen these complements from you 🙂 i am one of your fans 🙂 i have sent a mail to you 🙂

 9. d.s.ramaswamy ಹೇಳುತ್ತಾರೆ:

  Your write up on kiragoorina gayyaligalu is good. Sorry I can’t use Kannada in my mobile. While readin/listening/watching a movie we will be comparing the earlier one we know better than this. If it haunts then only we will continue. This movie could have been better if done by kasaravally. Keep writing.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s