Posts Tagged ‘ಐಟಿ ಗೋಳು’

(ಅ)ಪಾರದರ್ಶಕ

Posted: ಜೂನ್ 23, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ನಾನೊಂದು ಅನಂತ ಅವಕಾಶದಲ್ಲಿ
ಕಂಪ್ಯೂಟರಿಗೆ ಬುದ್ದಿ ಹೇಳುತ್ತಾ ಕೂತಿದ್ದೇನೆ.
ಇಲ್ಲಿ ಗೋಡೆಗಳೇ ಇಲ್ಲ.
ಸುತ್ತಾ ಇರುವುದು ಪಾರದರ್ಶಕ
ಗಾಜಿನ ತಡೆಗಳು
ಮತ್ತು ಅಪಾರದರ್ಶಕ ಮನುಜರು.

ಇಲ್ಲಿ ಪರಿಣಿತ ಹಕ್ಕಿಗಳಿವೆ.
ಆದರವು ಬಣ್ಣದಾಕಾಶದೆದುರು
ಹಾರುವುದಿಲ್ಲ ಹಾಡುವುದೂ ಇಲ್ಲ.
ಬರಿದೆ ಮೀಟಿಂಗುಗಳ ನಡೆಸುತ್ತವೆ.
ಸುಳ್ಳುಗಳ ಬರೆದಿಟ್ಟು ರಿವ್ಯೂಗಾಗಿ ಕಾಯುತ್ತವೆ
ಮತ್ತು ಬೇಕೆಂದಾಗ ಸುಳ್ಳೇ ನಗುತ್ತವೆ.

ಇಲ್ಲಿ ಕಾಲ ದಿನಗಳಲ್ಲೋ
ನಿಮಿಷಗಳಲ್ಲೋ ಸರಿಯುವುದಿಲ್ಲ.
ಕಾಫಿ ಟೀ ಬ್ರೇಕುಗಳಲ್ಲೂ
ಇನ್ಕ್ರಿಮೆಂಟು ಬೇಕುಗಳಲ್ಲೂ
ವೀಕೆಂಡುಗಳಲ್ಲೂ ವೀಕ್ ಡೇಗಳಲ್ಲೂ
ನಿಧಾನಕ್ಕೆ ಸಾಯುತ್ತದೆ.

ಇಲ್ಲಿಂದ ದೂರ ದೂರ ಕಾಣುತ್ತವೆ
ಬೇರೆ ಬೇರೆ ಆಕಾಶಗಳು
ಮತ್ತು ಬೇರೆ ಬೇರೆ ಭೂಮಿಗಳು.
ಇಲ್ಲೂ ಆಗಾಗ ಬೀಳುತ್ತವೆ
ಮಳೆಯಂತಾ ಹನಿಗಳು.
ಆದರವು ‘ಆಹಾ ಮಳೆ’ ಎನಿಸಿಕೊಳ್ಳುವುದಿಲ್ಲ
what the fuck ಎನಿಸಿಕೊಳ್ಳುತ್ತವೆ.

Advertisements

ಇವು ಕನ್ನಡದ
ಹೈಕುಗಳಲ್ಲ ಮಾರಾಯ್ರೆ
ಆಂಗ್ಲದ hikeಗಳು!

ಸಾಧಾರಣದಿಂದ ಭಾರೀ ಮಳೆ
ಅನ್ನೋ ಮಂತ್ರ ಗೊತ್ತುಂಟಲ್ಲ.
ಆಮೇಲೆ ಆಗಿದ್ದೆಷ್ಟು ಅಂತ
ಕೇಳಿದವರೇ ಇಲ್ಲ!

ನಮ್ಮಲ್ಲೋ ಒಂದಿದೆ ಮಾರಾಯ್ರೇ
ಕರೀತಾರೆ ಅವಮಾನ ಇಲಾಖೆ ಅಂತ ಎಲ್ಲ.
ಅದೂ ಹಿಂಗೇ
ಹವಾಮಾನ ಇಲಾಖೆದೇ ಕಾಪಿ.
ಮೆನೆಜರ್ರೋ ಟೀ ಎಲ್ಲೂ
ಕೂತ್ಕಂಡು ಕುಡೀತಾರೆ ಕಾಫಿ
ಬರೀತಾರೆ ಇಷ್ಟಿಷ್ಟುದ್ದ mailಉ
ಹಿಂದಿನ್ ಸಲಕ್ಕಿಂತ ಖಂಡಿತ ಮೇಲು

ಈ ಬಾರಿ ಭಾರೀ ಭಾರೀ
ಗುಡುಗು ಸಿಡಿಲು.
ಭಾರೀಯಿಂದ ಅತಿ ಭಾರೀ hikeಉ
ಅಂತೆಲ್ಲ ಬಂದ್ವೇ ಬಂದ್ವು mailಉ.
ನಾವೂ ಕೂತಿದ್ವು ಬಾಯಿ ಕಳೆದು.

ಅಯ್ಯೋ ಅಯ್ಯೋ
ಕೊನೆಗೋ hikeಉ ಬಂತಲ್ಲ
ಸ್ವಾತಿ ಮಳೆ ಹಂಗೆ
ಬೇಲಿ ಹೊರಗೇ ನಿಲ್ತಲ್ಲ!